See also 2tower
1tower ಟೌಅರ್‍
ನಾಮವಾಚಕ
  1. ಗೋಪುರ; ಶಿಖರ:
    1. (ಚರ್ಚು ಮೊದಲಾದ ಭಾರಿ ಕಟ್ಟಡಗಳ) ಮೇಲುಗಡೆಯ, (ಮುಖ್ಯವಾಗಿ) ಚದುರತಲದ ಯಾ ಗುಂಡುತಲದ ಎತ್ತರವಾದ ಕಟ್ಟಡ.
    2. ಯಂತ್ರೋಪಕರಣ, ಸಾಧನಸಲಕರಣೆ, ಚಾಲಕರು, ಮೊದಲಾದವುಗಳಿಗೆಂದು ಉದ್ದೇಶಿಸಿದ ಎತ್ತರವಾದ ಕಟ್ಟಡ: control tower ನಿಯಂತ್ರಣ ಗೋಪುರ.
  2. ಗೋಪುರ–ವಠಾರ, ಗೃಹಸಂಕೀರ್ಣ; ಕಚೇರಿಗಳು ಯಾ ವಾಸದ ಮನೆಗಳು ಒಟ್ಟಿಗೆ ಇರುವ, ಎತ್ತರವಾದ ದೊಡ್ಡ ಕಟ್ಟಡ.
  3. ಗೋಪುರವನ್ನುಳ್ಳ ಕೋಟೆ, ದುರ್ಗ.
  4. ರಕ್ಷಣಾಸ್ಥಾನ; ರಕ್ಷೆ.
ಪದಗುಚ್ಛ
  1. cooling tower (ಶಾಖ ಮೊದಲಾದವನ್ನು ತಂಪು ಮಾಡಿ ನಿಯಂತ್ರಿಸುವ) ತಂಪುಗೋಪುರ; ಶೀತಕಗೋಪುರ.
  2. the tower (of London) (ಬ್ರಿಟಿಷ್‍ ಪ್ರಯೋಗ) ಈಗ ಇಂಗ್ಲೆಂಡಿನ ಅರಮನೆಯ ಆಭರಣಾದಿಗಳ ಸಂಗ್ರಹಶಾಲೆ ಮೊದಲಾದವುಗಳಿರುವ (ಹಿಂದೆ ದುರ್ಗ, ಅರಮನೆ, ಬಂದೀಖಾನೆ, ಮೊದಲಾದವುಗಳಿದ್ದ) ಲಂಡನ್‍ ಗೋಪುರ.
  3. tower of strength ಬಲ ಸ್ತಂಭ; ಆಧಾರಸ್ತಂಭ; ರಕ್ಷಕ; ನೆಚ್ಚಬಹುದಾದ ಬೆಂಬಲ ನೀಡುವ, ಬಲಿಷ್ಠ ವ್ಯಕ್ತಿ.