torus ಟಾರಸ್‍
ನಾಮವಾಚಕ
(ಬಹುವಚನ tori ಉಚ್ಚಾರಣೆ ಟಾರೈ).
  1. (ವಾಸ್ತುಶಿಲ್ಪ) ಕಂಬದ ಪೀಠದಲ್ಲಿ ಮಾಡಿದ ಅರೆಯುರುಳೆಯ ದಿಂಡು.
  2. (ಸಸ್ಯವಿಜ್ಞಾನ) ಪುಷ್ಪಪಾತ್ರ; ಹೂಬಟ್ಟಲು; ಪುಷ್ಪಪಾತ್ರದಂಥ ಕಾವಿನ ತುದಿ.
  3. (ಅಂಗರಚನಾಶಾಸ್ತ್ರ) (ಸ್ನಾಯುವಿನ ಯಾ ಮೂಳೆಯ) ನುಣುಪೇಣು; ದುಂಡೇಣು.
  4. (ಜ್ಯಾಮಿತಿ) ಬಳೆ; ಟೋರಸ್‍; ಮುಚ್ಚಿರುವ ವಕ್ರವು, ಮುಖ್ಯವಾಗಿ ವೃತ್ತವು, ತನ್ನ ತಲದಲ್ಲೇ ಇರುವ ಮತ್ತು ತನ್ನ ಮೂಲಕ ಹಾದು ಹೋಗದಿರುವ ಸರಳರೇಖೆಯೊಂದನ್ನು ಅಕ್ಷವಾಗಿ ಮಾಡಿಕೊಂಡು ತಿರುಗಿಸಿದಾಗ ರೂಪುಗೊಳ್ಳುವ ಘನಾಕೃತಿ ಯಾ ಮೈ. Figure: torus