See also 1throw
2throw ತ್ರೋ
ನಾಮವಾಚಕ
  1. ಎಸೆತ; ಒಗೆತ; ಕ್ಷೇಪಣ.
  2. ದಾಳದ ಎಸೆತ, ಗರ; ದಾಳದಲ್ಲಿ ಗರ ಹಾಕುವುದು.
  3. ಮೀನಿನ ಗಾಳದ ಎಸೆತ, ಬೀಸು.
  4. ಕ್ಷಿಪ್ತ ಯಾ ಕ್ಷೇಪಣ ದೂರ; ಎಸೆತದ ದೂರ; ಎಸೆಯಬಲ್ಲ ಅಂತರ: a record throw with the hammer ಸುತ್ತಿಗೆಯ ಅತ್ಯಂತ ದೂರದ ಎಸೆತ.
  5. (ಕ್ರಿಕೆಟ್‍) (ಅಕ್ರಮವೆಂದು ಗಣಿಸುವ, ಬೌಲರನ) ಚೆಂಡಿನ–ಎಸೆತ, ಬೀರು, ಬೀಸಿಕೆ.
  6. (ಭೂವಿಜ್ಞಾನ ಮತ್ತು ಗಣಿಗಾರಿಕೆ)
    1. ಸ್ತರದಲ್ಲಿಯ ವಿಚ್ಫಿತ್ತಿ, ಭಂಗ.
    2. (ಈ ಭಂಗದಿಂದ ಲಂಬನೇರದಲ್ಲಿ ಉಂಟಾದ) ಸ್ಥಾನಪಲ್ಲಟ ಯಾ ಅದರ ಮೊತ್ತ; ಜರುಗು(ಮೊತ್ತ).
  7. ಚರಕಿ ಯಂತ್ರ; ತೀವ್ರ ಭ್ರಮಣ ಚಲನೆಯ ಯಂತ್ರ ಸಲಕರಣೆ.
  8. (ಯಂತ್ರಶಾಸ್ತ್ರ) ಯಂತ್ರದ ಮುಳ್ಳು ಸೂಚಿಸುವ ಚಲನೆಯ ಅಂತರ, ದೂರ.
  9. ಕುಸ್ತಿಯಲ್ಲಿ ಕೆಡೆತ; ಚಿತ್ತು; ಬೀಳಿಸಿದ್ದು ಯಾ ಬಿದ್ದಿದ್ದು.
  10. (ಅಮೆರಿಕನ್‍ ಪ್ರಯೋಗ)
    1. ಪೀಠೋಪಕರಣದ ಹಗುರವಾದ ಹೊದಿಕೆ.
    2. ಹಗುರವಾದ ಕಂಬಳಿ.
    1. (ಯಂತ್ರದ) ವಂಕದ ಯಾ ಕ್ರ್ಯಾಂಕು ಮೊದಲಾದವುಗಳ ಚಲನೆ.
    2. ಈ ಚಲನೆಯ ಅಂತರ, ದೂರ.
  11. (ಅಶಿಷ್ಟ) ಒಂದೊಂದೂ; ಪ್ರತಿಯೊಂದೂ; ತಲಾ: sold at Rs.10 a throw ತಲಾ ಒಂದಕ್ಕೆ 10 ರೂಪಾಯಿಗಳಂತೆ ಮಾರಲಾಯಿತು.