See also 2romance  3romance
1romance ರೋಮ್ಯಾನ್ಸ್‍
ನಾಮವಾಚಕ
  1. (Romance) ರೊಮಾನ್ಸ್‍ ಭಾಷೆ:
    1. ಲ್ಯಾಟಿನ್‍ ಭಾಷೆಯಿಂದ ಅಭಿವೃದ್ಧಿಗೊಂಡು ಅದರಿಂದ ಭಿನ್ನವಾಗಿ ಬೆಳೆದ ಪುರಾತನ ಹ್ರಾನ್ಸಿನ ಜನಪದ ಯಾ ದೇಶೀಯ ಭಾಷೆ.
    2. ಇಟಲಿ, ಸ್ಪೇನ್‍, ಪ್ರೊವೆನ್ಸ್‍, ಮೊದಲಾದ ಪ್ರದೇಶಗಳಲ್ಲಿಯ ಇದಕ್ಕೆ ಸಂವಾದಿಯಾದ ಭಾಷೆ.
    3. (ಸಾಮೂಹಿಕವಾಗಿ) ಲ್ಯಾಟಿನ್‍ ಜನ್ಯ ಭಾಷೆಗಳು.
  2. ರೊಮಾನ್ಸ್‍:
    1. ದುರ್ಬಲರ ರಕ್ಷಣೆಯನ್ನು ಆದರ್ಶವಾಗಿಟ್ಟುಕೊಂಡಿದ್ದ ಮಧ್ಯಯುಗದ ವೀರಪುರುಷನ (ಸಾಮಾನ್ಯವಾಗಿ ಕಾವ್ಯ ರೂಪದಲ್ಲಿ ರೋಮಾನ್ಸ್‍ ಭಾಷೆಗಳಲ್ಲಿ ರಚಿತವಾದ) ಜೀವನ ಮತ್ತು ಸಾಹಸಗಳ ಕಥೆ.
    2. ಸಾಮಾನ್ಯ ಜೀವನದಿಂದ ದೂರವಾದ ಯಾ ಅನುದಿನದ ಬದುಕನ್ನು ಆದರ್ಶೀಕರಿಸುವ ಮನೋಭಾವದಿಂದ ಕೂಡಿದ ವಾತಾವರಣ ಯಾ ಪ್ರವೃತ್ತಿ.
    3. ರೋಮಾಂಚಕ ಯಾ ಸಾಹಸ ಕಥೆಗಳ ವಾತಾವರಣ.
    4. ಪ್ರೇಮ ಪ್ರಕರಣದಲ್ಲಿ ಪರಸ್ಪರ ಆಕರ್ಷಣೆಯನ್ನು ಸುತ್ತುವರಿದಿರುವ ಅಚ್ಚರಿಯ ಯಾ ಆಧ್ಯಾತ್ಮಿಕ ರಹಸ್ಯದ ಭಾವ.
    5. ಭಾವಾತಿರೇಕದ ಯಾ ಆದರ್ಶೀಕರಿಸಿದ ಪ್ರೇಮ, ಪ್ರಣಯ.
    6. ಪ್ರಣಯ ಪ್ರಕರಣ; ಪ್ರೇಮಪ್ರಸಂಗ.
    7. ರಮ್ಯಸಾಹಿತ್ಯ; ರೊಮ್ಯಾಂಟಿಕ್‍ ಪ್ರೇಮ, ಮಹಾಸಾಹಸ, ಅತಿ ಕಲ್ಪನಾತ್ಮಕ ಅವಾಸ್ತವಿಕ ಸಂಗತಿಗಳು ಪ್ರಧಾನವಸ್ತುವಾಗಿರುವ ಸಾಹಿತ್ಯ ಪ್ರಕಾರ.
    8. ಈ ಪ್ರಕಾರದ ಸಾಹಿತ್ಯಕೃತಿ.
  3. ಅತ್ಯುತ್ಪ್ರೇಕ್ಷೆ; ಅತಿರಂಜಕತೆ.
  4. ರಂಜಕ ಸುಳ್ಳು; ಕಣ್ಣಿಗೆ ಕಟ್ಟುವಂಥ, ರಂಜನೀಯ ಸುಳ್ಳು; ಕಟ್ಟುಕಥೆ.
  5. (ಸಂಗೀತ) ಚಿಕ್ಕ, ಸರಳ ಕೃತಿ.