(ವಿರಳ ಪ್ರಯೋಗ) (ಸೂರ್ಯ ಮೊದಲಾದವುಗಳ) ಉದಯ; ಮೂಡಿಕೆ: at rise of sun ಸೂರ್ಯೋದಯ ಕಾಲಕ್ಕೆ.
ಏರಿಕೆ:
ಏರುವ ಕ್ರಿಯೆ, ವಿಧಾನ ಯಾ ಪ್ರಮಾಣ.
ಧ್ವನಿಯ ಯಾ ಸ್ಥಾಯಿಯ ಏರಿಕೆ.
ಪ್ರಮಾಣ, ವ್ಯಾಪ್ತಿ ಮೊದಲಾದವುಗಳ ಹೆಚ್ಚಿಕೆ, ಹೆಚ್ಚಳ: a rise in unemployment ನಿರುದ್ಯೋಗದ ಏರಿಕೆ.
ಏರು; ಚಡಾವು; ದಿಣ್ಣೆ; ತಿಟ್ಟು; ಗುಡ್ಡ; ಮೊರಡಿ: came to a rise in the road ರಸ್ತೆಯಲ್ಲಿ ಒಂದು ಏರಿಗೆ ಬಂದೆವು. chapel stands on a rise ಪ್ರಾರ್ಥನಾ ಮಂದಿರ ಒಂದು ಗುಡ್ಡದ ಮೇಲಿದೆ.
(ಮೀನು) ನೀರ ಮೇಲ್ಗಡೆ ಬರುವುದು; (ಮೀನಿನ) ನೀರ ಮೇಲ್ಗಡೆಯ ಚಲನೆ: not a sign of a rise ಮೀನು ನೀರು ಮೇಲ್ಗಡೆ ಬರುವುದರ ಸೂಚನೆಯಿಲ್ಲ.
(ಮೆಟ್ಟಲು, ಕಮಾನು, ಇಳುಕಲು ಮೊದಲಾದವುಗಳ) ಎತ್ತರ.
(ಮೆಟ್ಟಲು ಸಾಲಿನ ಎರಡು ಮೆಟ್ಟಲು ಹಲಗೆಗಳನ್ನು ಕೂಡಿಸುವ) ನಿಲುಪಟ್ಟಿ.
ಪದಗುಚ್ಛ
get (ortake) a rise out of one (ಆಡುಮಾತು) (ಮುಖ್ಯವಾಗಿ ಕೀಟಲೆ ಮಾಡಿ) ಒಬ್ಬನು ತನ್ನ ಕೋಪ ಮೊದಲಾದ ಭಾವುಕ ಯಾ ಪ್ರತಿಕ್ರಿಯೆಯನ್ನು ತೋರಿಸಿಕೊಳ್ಳುವಂತೆ ಮಾಡು; ಕೆರಳಿಸು; ರೇಗಿಸು: you will get a rise out of him if you mention the name of cricket ನೀನು ಕ್ರಿಕೆಟ್ಟಿನ ಹೆಸರು ಹೇಳಿದರೆ ಅವನನ್ನು ಕೆರಳಿಸುತ್ತದೆ.
give rise to ಕಾರಣವಾಗು; (-ಕ್ಕೆ) ಅವಕಾಶಕೊಡು: the industrial revolution gave rise to urbanization ಕೈಗಾರಿಕಾಕ್ರಾಂತಿ ನಗರೀಕರಣಕ್ಕೆ ಕಾರಣವಾಯಿತು.
have one’s rise ತನ್ನ ಮೂಲವಾಗಿ ಹೊಂದಿರು; ಹುಟ್ಟು; ಪ್ರಾರಂಭವಾಗು.