See also 2outcrop
1outcrop ಔಟ್‍ಕ್ರಾಪ್‍
ನಾಮವಾಚಕ
  1. ಹೊರ ಬೆಳವಣಿಗೆ; ಬಹಿಸ್ಸರಣ; ಹೊರಚಾಚು; ಬಹಿರ್ಗತ (ಶಿಲಾ) ಸ್ತರ; ನೆಲದಿಂದ ಮೇಲೆದ್ದ ಯಾ ತಲೆ ಎತ್ತಿದ ಕಲ್ಲುಪದರ; ಭೂಗರ್ಭದಿಂದ ಮೇಲೆದ್ದು ಹೊರಗೆ ಕಾಣಿಸಿಕೊಳ್ಳುವ ಶಿಲೆ ಯಾ ಶಿಲಾ ಸ್ತರ.
  2. (ರೂಪಕವಾಗಿ) (ಇದ್ದಕ್ಕಿದ್ದಂತೆ ಉಂಟಾಗುವ ಹಿಂಸಾಚಾರದಿಂದ ಕೂಡಿದ) ಗಮನಾರ್ಹವಾದ ಪ್ರದರ್ಶನ, ಘಟನೆ, ಆಂದೋಳನ, ಬಂಡಾಯ, ಮೊದಲಾದವು: an outcrop of student demonstrations ವಿದ್ಯಾರ್ಥಿ ಪ್ರದರ್ಶನಗಳ ಹಠಾತ್‍ ಪ್ರದರ್ಶನ.