naturalism ನ್ಯಾಚರಲಿಸಮ್‍
ನಾಮವಾಚಕ
  1. ಸಹಜ ಕ್ರಿಯೆ; ಸ್ವಾಭಾವಿಕ ಕ್ರಿಯೆ; ಸಹಜ ಪ್ರವೃತ್ತಿಗಳಿಂದ ಪ್ರಚೋದಿತವಾದ ಕ್ರಿಯೆ; ಸಹಜ ಪ್ರವೃತ್ತಿಗಳಿಂದ ಪ್ರಚೋದಿತವಾದ ಕ್ರಿಯೆ, ಕಾರ್ಯ.
  2. ಪ್ರಾಕೃತಿಕ ಧರ್ಮ; ನೈಸರ್ಗಿಕ ಧರ್ಮ; ಸಹಜ ಧರ್ಮ; ಕೇವಲ ಪ್ರಕೃತಿಯನ್ನು, ನಿಸರ್ಗವನ್ನು ಆಧರಿಸಿರುವ ನೀತಿ ಶಾಸ್ತ್ರ ಯಾ ಮತಧರ್ಮ.
  3. (ತತ್ತ್ವಶಾಸ್ತ್ರ) ಪ್ರಕೃತಿ ವಾದ; ನಿಸರ್ಗ ವಾದ; ಸ್ವಭಾವ ವಾದ; ಭೌತವಾದ;
    1. ಜಗತ್ತಿನ ಸೃಷ್ಟಿಗೆ ಮತ್ತು ಸ್ಥಿತಿಗೆ ಯಾವುದೇ ನಿಸರ್ಗಾತೀತ ಯಾ ಆಧ್ಯಾತ್ಮಿಕ ಕಾರಣ ಮತ್ತು ಶಕ್ತಿ ಬೇಕಾಗಿಲ್ಲ, ಅದು ಸ್ವತಂತ್ರ ಸ್ವಯಂಭು ಸ್ವಯಂಪೂರ್ಣ ಮತ್ತು ಸ್ವಯಂ ನಿಯಂತ್ರಕ, ಅದು ಏಕಮೇವಾದ್ವಿತೀಯ ಸತ್ಯ, ಮಾನವ ಅದರ ಒಂದು ಅಂಗ – ಎಂಬ ಸಿದ್ಧಾಂತ; ಜಗತ್ತನ್ನು ಕುರಿತಂತೆ ಯಾವುದೇ ಅತಿಮಾನುಷ ಯಾ ಆಧ್ಯಾತ್ಮಿಕ ಪರಿಗಣನೆಯನ್ನು ನಿರಾಕರಿಸುವ ದೃಷ್ಟಿ, ವಾದ; ಕೇವಲ ನೈಸರ್ಗಿಕ ಕಾರಣಗಳು ಮತ್ತು ನಿಯಮಗಳು ಜಗತ್ತಿನಲ್ಲಿ ಎಲ್ಲವನ್ನೂ ವಿವರಿಸಬಲ್ಲವೆಂಬ ವಾದ.
    2. ಎಲ್ಲ ನೈತಿಕ ನಿರ್ಣಯಗಳೂ ವಸ್ತುನಿಷ್ಠ ವರ್ಣನೆಗಳು ಮತ್ತು ಅವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಬಹುದು ಎಂಬ ವಾದ.
    3. (ದೇವತಾಶಾಸ್ತ್ರ) ಮತಧರ್ಮದ ಎಲ್ಲ ತತ್ತ್ವಗಳೂ ನಿಸರ್ಗದ ಕ್ರಿಯೆಗಳ ಅಧ್ಯಯನದಿಂದಲೇ ಅನುಗತವಾಗುತ್ತವೆ, ಅವಕ್ಕೆ ದೇವ ಪ್ರಕಾಶನ ಬೇಕಾಗಿಲ್ಲ ಎಂಬ ವಾದ.
  4. (ಸಾಹಿತ್ಯ, ಕಲೆ) ಯಥಾರ್ಥ ಚಿತ್ರಣ; ಯಥಾರ್ಥವಾದ; ವಾಸ್ತವಿಕತೆ; ವಾಸ್ತವಿಕ ಬದುಕನ್ನು ಆದರ್ಶೀಕರಿಸದೆ, ಅದು ಇರುವಂತೆಯೇ ಪೂರ್ಣ ವಿವರಗಳೊಂದಿಗೆ ವಸ್ತುನಿಷ್ಠವಾಗಿ, ನೈತಿಕ ನಿರ್ಣಯಗಳ ಸೋಂಕಿಲ್ಲದೆ, ಯಥಾವತ್ತಾಗಿ ಚಿತ್ರಿಸುವ, ವರ್ಣಿಸುವ ವಿಧಾನ ಯಾ ಅದನ್ನು ಕುರಿತ ಸಿದ್ಧಾಂತ.
  5. ಸಹಜ ವರ್ತನೆ; ಸ್ವಾಭಾವಿಕ ಪ್ರವೃತ್ತಿ; ಸಂಪ್ರದಾಯಗಳ ಬಗ್ಗೆ ಅಲಕ್ಷ್ಯ, ಉಪೇಕ್ಷೆ.