See also 1live
2live ಲೈವ್‍
ಗುಣವಾಚಕ
  1. ಸಜೀವ; ಜೀವಂತ; ಸಪ್ರಾಣ; ಬದುಕಿರುವ; ಜೀವಂತವಾಗಿರುವ; ಜೀವದಿಂದಿರುವ; ಪ್ರಾಣವಿರುವ; ಜೀವಿಸಿರುವ: live animals ಜೀವಂತ ಪ್ರಾಣಿಗಳು.
  2. (ಪ್ರಸಾರದ ವಿಷಯದಲ್ಲಿ) ಜೀವಂತ; ನೇರ(ವಾದ); ಪ್ರತ್ಯಕ್ಷ; ಮುದ್ರಿತವಲ್ಲದ; ಘಟನೆಯ ಸಮಕಾಲದಲ್ಲೇ ನೋಡುವ ಯಾ ಕೇಳುವ; ಘಟನೆ ನಡೆಯುತ್ತಿರುವಾಗಲೇ ನೇರವಾಗಿ ಬಿತ್ತರಿಸಿದ.
  3. ಶಕ್ತಿಪೂರ್ಣ; ಸತ್ತ್ವಪೂರ್ಣ; ಪ್ರಾಮುಖ್ಯವುಳ್ಳ.
  4. ರೂಢಿ ತಪ್ಪಿರದ ಯಾ ಹಳೆಯದಾಗಿರದ; ಜೀವಂತವಾಗಿರುವ; ಚಲಾವಣೆಯಲ್ಲಿರುವ; ಪ್ರಸಕ್ತ; ಪ್ರಚಲಿತ: disarmament is still a live issue ನಿರಸ್ತ್ರೀಕರಣ ಈಗಲೂ ಜೀವಂತವಾದ ವಿಷಯ.
  5. ಜೀವಂತ; ವಿವಿಧ ರೂಪಗಳಲ್ಲಿ ಶಕ್ತಿಯನ್ನು ವ್ಯಯಿಸುವ ಯಾ ವ್ಯಯಿಸಬಲ್ಲ:
    1. (ಕಲ್ಲಿದ್ದಲಿನ ವಿಷಯದಲ್ಲಿ) ಜ್ವಲಂತ; ಉರಿಯುತ್ತಿರುವ; ಮುಖ್ಯವಾಗಿ ನಿಗಿ ನಿಗಿ ಬೆಳಗುತ್ತಿರುವ; ಜ್ವಲಿಸುತ್ತಿರುವ: live embers ಜ್ವಲಿಸುವ ಕೆಂಡಗಳು.
    2. (ಸಿಡಿಗುಂಡಿನ ವಿಷಯದಲ್ಲಿ) ಇನ್ನೂ ಸಿಡಿದಿಲ್ಲದ; ಸ್ಫೋಟವಾಗದಿರುವ.
    3. (ದೀಪದ ಕಡ್ಡಿಯ ವಿಷಯದಲ್ಲಿ) ಇನ್ನೂ ಹೊತ್ತಿಸಿಲ್ಲದ.
    4. (ತಂತಿ ಮೊದಲಾದವುಗಳ ವಿಷಯದಲ್ಲಿ) ವಿದ್ಯುತ್ತಿರುವ; ಸವಿದ್ಯುತ್‍; ವಿದ್ಯುತ್ಪೂರ್ಣ; ವಿದ್ಯುತ್ಪ್ರವಾಹಭರಿತ.
  6. (ಶಿಲೆಯ ವಿಷಯದಲ್ಲಿ) ಸ್ಥಾನಿಕ; ಸ್ಥಳೀಯ; ಸ್ವಸ್ಥಾನದಿಂದ ಬೇರ್ಪಡದೆ ಅಲ್ಲಿಯೇ ಭೂಮಿಯ ಭಾಗದಂತೆ ಇರುವ.
  7. (ಯಂತ್ರದ ಚಕ್ರ, ಅಚ್ಚುಗಂಬಿ, ಮೊದಲಾದವುಗಳ ವಿಷಯದಲ್ಲಿ) ಚಲಿಸುತ್ತಿರುವ; ನಡೆಯುತ್ತಿರುವ; ಚಾಲನೆ ಆಗುತ್ತಿರುವ ಯಾ ಮಾಡುತ್ತಿರುವ.
  8. ಜೀವಸೂಚಕ: the live sounds of the forest ಕಾಡಿನ ಜೀವ ಸೂಚಕ ಶಬ್ದಗಳು.