See also 2hum  3hum  4hum
1hum ಹಮ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ hummed, ವರ್ತಮಾನ ಕೃದಂತ humming.) ಸಕರ್ಮಕ ಕ್ರಿಯಾಪದ ಗುಂಯ್‍ಗುಡು; ಗುಂಯ್‍ಗುಟ್ಟುತ್ತ ಹೇಳು, ಉಚ್ಚರಿಸು ಯಾ ಹಾಡು.

ಅಕರ್ಮಕ ಕ್ರಿಯಾಪದ
  1. (ಜೇನುನೊಣ, ತಿರುಗುತ್ತಿರುವ ಬುಗುರಿ, ಮೊದಲಾದವುಗಳಂತೆ) ಮೊರೆ; ಗುಂಯ್‍ ಗುಡು; ಝೇಂಕರಿಸು
  2. (ಮುಖ್ಯವಾಗಿ ಹಿಂದು ಮುಂದು ನೋಡುವ ಮನಃಸ್ಥಿತಿಯಲ್ಲಿ) ಗುಂಯ್‍ಗುಟ್ಟು; ಮೆಲ್ಲನೆ ಅಸ್ಪಷ್ಟ ಧ್ವನಿಮಾಡು
  3. ಮೂಗಿನಲ್ಲಿ ಹಾಡು; ತುಟಿಬಿಚ್ಚದೆ ಹಾಡು
  4. (ಆಡುಮಾತು) ಭರದ ಚಟುವಟಿಕೆಗಳಲ್ಲಿ ತೊಡಗಿರು; ಚಚ್ಚರದಿಂದಿರು; ಚಟುವಟಿಕೆಯಲ್ಲಿರು; ಚುರುಕಾಗಿ ಕೆಲಸ ಮಾಡುತ್ತಿರು: make things hum ಎಲ್ಲ ಕೆಲಸಗಳೂ ಚುರುಕಿನಿಂದ, ಭರದಿಂದ, ಸಾಗುವಂತೆ ಮಾಡು
  5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ನಾರು; ನಾತ ಹೊಡೆ; ದುರ್ವಾಸನೆ ಹೊಡೆ; ಕೆಟ್ಟನಾತ ಬೀರು.
ಪದಗುಚ್ಛ

hum and haw (or ha) (ಮುಖ್ಯವಾಗಿ ಅನಿಶ್ಚಿತತೆ ಸೂಚಿಸಲು) ‘ಹಾಹೂಂ’ ಎಂದು ರಾಗ ಎಳೆ; ‘ಹಮ್‍ ಹಾ’ ಎನ್ನು.