See also 2hog
1hog ಹಾಗ್‍
ನಾಮವಾಚಕ
  1. ಹಂದಿ; ಮುಖ್ಯವಾಗಿ ಹಿಡಮಾಡಿ ಮಾಂಸಕ್ಕಾಗಿ ಬೆಳೆಸಿದ ಗಂಡು ಹಂದಿ.
  2. (ಪ್ರಾಂತೀಯ ಪ್ರಯೋಗ) (ಒಂದು ಸಾರಿಯೂ ಉಣ್ಣೆ ಕತ್ತರಿಸಿಲ್ಲದ) ಚಿಕ್ಕ ಕುರಿ; ಎಳಗುರಿ.
  3. (ರೂಪಕವಾಗಿ)
    1. ಒರಟ; ಒಡ್ಡ.
    2. ಹೊಟ್ಟೆಬಾಕ.
    3. ಸ್ವಾರ್ಥಿ; ಬೇರೆಯವರ ಬಗ್ಗೆ ಪರಿಗಣನೆ ಯಾ ದಯಾದಾಕ್ಷಿಣ್ಯ ಇಲ್ಲದವನು.
    4. ಕೊಳಕ; ಶ್ವಪಚ; ಗಲೀಜು, ಹೊಲಸು – ಮನುಷ್ಯ.
  4. (ಅಶಿಷ್ಟ) ರೈಲ್ವೆ ಎಂಜಿನ್‍.
ಪದಗುಚ್ಛ
  1. hog in armour ಕವಚ ತೊಟ್ಟ ಹಂದಿ; ಬಿಗುವಿನಿಂದಿರುವ ಅಸಡ್ಡಾಳ ಮನುಷ್ಯ.
  2. hog on ice (ಅಮೆರಿಕನ್‍ ಪ್ರಯೋಗ) (ಆಡುಮಾತು) ಅಭದ್ರ ವ್ಯಕ್ತಿ; ಭದ್ರತೆಯಿಲ್ಲದ ವ್ಯಕ್ತಿ; ತನ್ನ ಸ್ಥಾನಮಾನಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಸದಾ ಕಳವಳಪಡುತ್ತಿರುವವನು(ಳು).
ನುಡಿಗಟ್ಟು
  1. go (the) whole hog (ಅಶಿಷ್ಟ) (ಕೆಲಸವನ್ನು) ಪೂರಾ, ಆದ್ಯಂತವಾಗಿ, ಯಾವುದನ್ನೂ ಬಿಡದೆ – ಮಾಡು; (ಕೆಲಸವನ್ನು) ಕೊನೆಮುಟ್ಟಿಸು.
  2. live high off (or on) the hog (ಅಮೆರಿಕನ್‍ ಪ್ರಯೋಗ) ಭೋಗಜೀವನ ನಡೆಸುತ್ತಿರು; ಸುಖಲೋಲುಪನಾಗಿರು; ಐಷಾರಾಮದಲ್ಲಿರು.