See also 2grate
1grate ಗ್ರೇಟ್‍
ನಾಮವಾಚಕ
  1. (ವಿರಳ ಪ್ರಯೋಗ) ಜಾಲರಿ:
    1. ಸಮಾಂತರವಾಗಿ ಯಾ ಒಂದನ್ನೊಂದು ಅಡ್ಡಹಾಯುವಂತೆ ಜೋಡಿಸಿರುವ ಮರದ ಯಾ ಲೋಹದ ಸರಳುಗಳ ವ್ಯವಸ್ಥೆ.
    2. (ದೃಗ್‍ವಿಜ್ಞಾನ) ವಿವರ್ತನೆಯ (diffraction) ಮೂಲಕ ರೋಹಿತವನ್ನು ಉತ್ಪತ್ತಿ ಮಾಡಲು ಜೋಡಿಸಿರುವ ಸಮಾಂತರ ತಂತಿಗಳ ತಂಡ ಯಾ ಗಾಜಿನ ಮೇಲೆ ಎಳೆದಿರುವ ಸಮಾಂತರ ಗೆರೆಗಳು.
  2. (ಬೆಂಕಿಗೂಡಿನಲ್ಲಿ, ಒಲೆಯಲ್ಲಿ ಯಾ ಕುಲುಮೆಯಲ್ಲಿ ಉರುವಲು ಹೊರಕ್ಕೆ ಬೀಳದಂತೆ ತಡೆಯುವ) ಸರಳಿನ ಚೌಕಟ್ಟು; (ಬೆಂಕಿಯ) ಸರಳು ತಡೆ.
  3. ಒಲೆ ಯಾ ಕುಲುಮೆ.