1giddy
ಗಿಡಿ
ಗುಣವಾಚಕ
- (ಕಾಯಿಲೆ, ವಿಜಯೋತ್ಸಾಹ, ಮೊದಲಾದವುಗಳಿಂದ) ತಲೆ ತಿರುಗುವ; ತಲೆ ಸುತ್ತುವ; ತಲೆಸುತ್ತಿ – ಬೀಳುವಂತಾಗುವ ಯಾ ಬೀಳುವ; ಗಿರಕಿ ಹೊಡೆಯುವ.
- ತಲೆ ತಿರುಗಿಸುವಂತೆ ಮಾಡುವ; ತಲೆ ಗಿರಕಿ ಹೊಡೆಸುವ: a giddy precipice ತಲೆ ತಿರುಗುವಂತೆ ಮಾಡುವ ಪ್ರಪಾತ.
- ಗಿರ್ರನೆ ತಿರುಗುವ; ಅತಿವೇಗದಲ್ಲಿ ಸುತ್ತುವ, ತಿರುಗುವ: giddy round of Fortune’s wheel ಗಿರ್ರನೆ ತಿರುಗುವ ಅದೃಷ್ಟ ದೇವತೆಯ ಚಕ್ರದ ಸುತ್ತು, ತಿರುಗು.
- (ವ್ಯಕ್ತಿಗಳ ವಿಷಯದಲ್ಲಿ) (ಅಧಿಕಾರ ಮೊದಲಾದ ಕಾರಣದಿಂದ)
- ಮದಿಸಿದ; ತಲೆ ತಿರುಗಿದ; ತಲೆ ತಿರುಕ.
- ಬುದ್ಧಿಗೆಟ್ಟ; ವಿವೇಚನೆಗೆಟ್ಟ; ದ್ವಾತದ್ವಾ ನಡೆದುಕೊಳ್ಳುವ; ತಿಳಿಗೇಡಿತನ ತೋರಿಸುವ.
- ಚಂಚಲ; ಸುಲಭವಾಗಿ ಉತ್ಸಾಹಭರಕ್ಕೆ ಒಳಗಾಗುವ.
- ತಿಕ್ಕಲಿನ; ಹುಡುಗಾಟದ; ಐಲುಪೈಲಿನ.
- (ಮುಖ್ಯವಾಗಿ ವ್ಯಂಗ್ಯವಾಗಿ) ಆಧಿಕ್ಯ, ತೀವ್ರತೆ ಸೂಚಿಸುವ ಪ್ರಯೋಗ.
ನುಡಿಗಟ್ಟು
- my giddy aunt! (ಆಶ್ಚರ್ಯಸೂಚಕ ಉದ್ಗಾರ) ಅಯ್ಯೋ ನನ್ನ ಚಿಕ್ಕಮ್ಮ!
- play the giddy goat (or ox) ಶುದ್ಧ ಕುರಿಯಂತೆ ಯಾ ತಿಳಿಗೇಡಿಯಂತೆ ವರ್ತಿಸು; ಹುಚ್ಚುಹುಚ್ಚಾಗಿ ವರ್ತಿಸು.