See also 2gate  3gate
1gate ಗೇಟ್‍
ನಾಮವಾಚಕ
  1. (ಊರಿನ ಪ್ರಾಕಾರ, ಕೋಟೆ ಗೋಡೆ, ಕಟ್ಟಡ, ಮೊದಲಾದವುಗಳ) ಹೊರಬಾಗಿಲು; ಮಹಾದ್ವಾರ; ಹೆಬ್ಬಾಗಿಲು.
  2. (ಬೈಬ್‍ಲ್‍) ನಗರದ ನ್ಯಾಯಸಭೆ ಸೇರುವ ಸ್ಥಳ; ಊರ ಚಾವಡಿ.
  3. ಕಣಿವೆಮಾರ್ಗ; ಬೆಟ್ಟದ ಕಣಿವೆ.
  4. ಬಾಗಿಲು; ದ್ವಾರ; ಪ್ರವೇಶ ಯಾ ನಿರ್ಗಮನ ಪಥ; ಒಳಕ್ಕೆ ಬರುವ, ಹೊರಕ್ಕೆ ಹೋಗುವ ಯಾವುದೇ ಹಾದಿ, ಮಾರ್ಗ.
  5. ಗೇಟು; ಕದ; ಪ್ರಾಕಾರದ ಬಾಗಿಲಿನ, ಕಾಂಪೌಂಡಿನ ಕದ.
  6. ತೂಬು; ನೀರು ಬಾಗಿಲು; ತೂಬಿನ ಕದ.
    1. ಪ್ರೇಕ್ಷಕರ ಸಂಖ್ಯೆ;(ಹುಟ್‍ಬಾಲ್‍ ಪಂದ್ಯ ಮೊದಲಾದವನ್ನು ನೋಡುವುದಕ್ಕಾಗಿ ಬಾಗಿಲಲ್ಲಿ ದುಡ್ಡು ಕೊಟ್ಟು)ಒಳಕ್ಕೆ ಬರುವವರ ಸಂಖ್ಯೆ.
    2. ಗೇಟುಬಾಬ್ತು; ಗೇಟುವಸೂಲಿ; ಬಾಗಿಲುವಸೂಲಿ;ಹೀಗೆ ವಸೂಲಾದ ಹಣ.
  7. (ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ಹೋಗಬೇಕಾದ)ನಂಬರು ಬಾಗಿಲು; ದ್ವಾರಸಂಖ್ಯೆ; ಸಂಖ್ಯೆ ಹಾಕಿದ ಪ್ರವೇಶ ದ್ವಾರ.
  8. (ಅಶಿಷ್ಟ) ಬಾಯಿ.
  9. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ವಜಾ ಮಾಡುವುದು; ಹೊರಗೆ, ಆಚೆಗೆ ಕಳುಹಿಸುವುದು.
  10. ಗೇಟು:
    1. ಗೋಡೆ, ರಸ್ತೆ ಯಾ ಓಣಿಯ ತೆರವನ್ನು ಮುಚ್ಚುವ ಅಡ್ಡತಡೆ, ತಡೆಗಟ್ಟು.
    2. ಕೀಲುಗಳ ಮೇಲೆ ಕೂರಿಸಿದ ಯಾ ತಿರುಗಾಣಿಯ ಮೇಲೆ ತಿರುಗುವ, ಯಾ ಆಚೆ ಈಚೆ ಜಾರಿಸಬಹುದಾದ, ಮರದ ಯಾ ಕಬ್ಬಿಣದ ಚೌಕಟ್ಟು, ಜಾಲರಿ.
    3. ಮೋಟಾರು ವಾಹನದ ಗೇರ್‍ಪೆಟ್ಟಿಗೆಯ ಸನ್ನೆಯನ್ನು ಚಲಿಸಿ ವಿವಿಧ ಗೇರುಗಳನ್ನು ಹಾಕಬಹುದಾದಂತೆ, H ಅಕ್ಷರದ ಆಕಾರದಲ್ಲಿ ಮಾಡಿರುವ ಸೀಳುಗಂಡಿಗಳ ವ್ಯವಸ್ಥೆ.
    4. ಚಲನಚಿತ್ರ ಕ್ಯಾಮರಾದ ಯಾ ಪ್ರೊಜಕ್ಟರಿನ ಲೆನ್ಸಿನ ಹಿಂಭಾಗದಲ್ಲಿ ಹಿಲ್ಮನ್ನು ಕ್ಷಣಕಾಲ ಹಿಡಿದಿಡುವ ಸಾಧನ.
    5. ಇತರ ವಿದ್ಯುತ್‍ ಸಂಜ್ಞೆಗಳಿಗೆ ಕಾರಣವಾಗುವ ಯಾ ಅವುಗಳನ್ನು ನಿಯಂತ್ರಿಸುವ ವಿದ್ಯುತ್‍ಸಂಜ್ಞೆ.
    6. ಹಲವು ಭುಕ್ತಸಂಜ್ಞೆಗಳ ಸಂಯೋಗದಿಂದ ನಿರ್ಧಾರಿತವಾಗುವ ಒಂದೇ ಒಂದು ಪ್ರಾಪ್ತಸಂಜ್ಞೆಯುಳ್ಳ ವಿದ್ಯುನ್ಮಂಡಲ.
ಪದಗುಚ್ಛ
  1. the gate of horn (ಗ್ರೀಕ್‍ ಪುರಾಣ) ಸತ್ಯ ಸ್ವಪ್ನದ್ವಾರ; ನಿಜದ ಕನಸು ಬರುವ ಹಾದಿ, ದ್ವಾರ.
  2. the gate of ivory (ಗ್ರೀಕ್‍ ಪುರಾಣ) ಮಿಥ್ಯಾ ಸ್ವಪ್ನದ್ವಾರ; ಸುಳ್ಳು ಕನಸು ಬರುವ ಹಾದಿ, ದ್ವಾರ.
ನುಡಿಗಟ್ಟು

get the gate (ಅಶಿಷ್ಟ)

  1. ನಿರಾಕೃತನಾಗು; ತಿರಸ್ಕೃತನಾಗು.
  2. (ಕೆಲಸದಿಂದ) ವಜಾ ಆಗು; ಚೀಟಿ ಪಡೆ.