See also 2float
1float ಹ್ಲೋಟ್‍
ನಾಮವಾಚಕ
  1. ತೇಲುವುದು; ತೇಲಿಕೆ; ಪ್ಲವನ.
  2. ತೇಲುವಸ್ತು; ತೇಲಾಡುತ್ತಿರುವ ಕಳೆ, ನೀರ್ಗಲ್ಲು, ಮೊದಲಾದವುಗಳ ರಾಶಿ.
  3. ತೇಲುವೆ; ಪ್ಲಾವಕ; ತೆಪ್ಪ.
  4. ತೇಲುಬೆಂಡು ಯಾ ತೇಲುಗರಿ; ಬೇಟೆಯು ಸಿಕ್ಕಿಬಿದ್ದಿರುವ ಸೂಚನೆ ಕೊಡಲು ಗಾಳದ ದಾರಕ್ಕೆ ಸಿಕ್ಕಿಸಿರುವ ಬೆಂಡು ಯಾ ಗರಿ.
  5. ತೇಲುಬೆಂಡು; ಈನು ಬಲೆಯ ಅಂಚನ್ನು ಎತ್ತಿ ಹಿಡಿದುಕೊಂಡಿರಲು ಹಾಕಿರುವ ಬೆಂಡು.
  6. (ಪ್ರಾಣಿವಿಜ್ಞಾನ) ತೇಲುವೆ; ಪ್ಲಾವಕಾಂಗ; ಈನು ಮೊದಲಾದ ಜಲಚರಪ್ರಾಣಿಗಳು ನೀರಿನಲ್ಲಿ ತೇಲಲು ಸಹಾಯಕವಾಗುವ ಟೊಳಾದ ಯಾ ಅನಿಲ ತುಂಬಿದ ಭಾಗ ಯಾ ಅಂಗ.
  7. ಪ್ಲಾವಕ; ವಿಮಾನವು ನೀರಿನ ಮೇಲೆ ತೇಲಲು ಸಹಾಯ ಮಾಡುವ, ರೆಕ್ಕೆಯ ಕೆಳಭಾಗದಲ್ಲಿರುವ, ದೋಣಿಯಂಥ ಟೊಳ್ಳು ರಚನೆ.
  8. ತೇಲುಚೆಂಡು; ನೀರು, ಪೆಟ್ರೋಲ್‍, ಮೊದಲಾದವುಗಳ ಪ್ರವಾಹವನ್ನು ನಿಯಂತ್ರಿಸುವ ಪೊಳ್ಳು ಚೆಂಡು.
  9. (ರಂಗಭೂಮಿ) (ಏಕವಚನ ಯಾ ಬಹುವಚನದಲ್ಲಿ) (ಮರೆಯಾಗಿಟ್ಟ) ಅಡಿದೀಪಗಳು; ರಂಗಸ್ಥಳದ ಮುಂಭಾಗದಲ್ಲಿ ಪ್ರೇಕ್ಷಕರಿಗೆ ಕಾಣದಂತೆ ಇಟ್ಟ ದೀಪದ ಸಾಲು, ದೀಪಮಾಲೆ.
  10. ತೇಲುಹಲಗೆ; ಪ್ಲಾವಕಫಲಕ; ಹುಟ್ಟುಗಾಲಿ ಯಾ ನೀರ್ಗಾಲಿಯ ಪರಿಧಿಯಲ್ಲಿದ್ದು ನೀರನ್ನು ಹಿಂದಕ್ಕೆ ತಳ್ಳುವ ಹಲಗೆಗಳಲ್ಲೊಂದು.
  11. ಗಿಡ್ಡಬಂಡಿ; ಒಂದು ತೆರದ ಗಿಡ್ಡನೆಯ ಗಾಡಿ: milk float ಹಾಲಿನ ಬಂಡಿ.
  12. ಪ್ರದರ್ಶನ – ಶಕಟ, ಬಂಡಿ; (ಮೆರವಣಿಗೆಗಳಲ್ಲಿ ಪ್ರದರ್ಶನ ವಸ್ತುಗಳನ್ನು ಮೆರೆಸುವ) ಗಾಲಿಯ ಚೌಕಟ್ಟು, ವೇದಿಕೆ.
  13. ಗಾರೆಮಣೆ; ಗಾರೆಯ ಕೆಲಸದಲ್ಲಿ ನಯಗೊಳಿಸಲು ಬಳಸುವ ಉಜ್ಜುಮಣೆ.
  14. ಒಕ್ಕೊಯ್ತದ ಅರ; ಗೀರುಗಳು ಅಡ್ಡನಾಗಿಲ್ಲದೆ ಒಂದೇ ಸಾಲಿನಲ್ಲಿರುವ ಅರ.
  15. (ನೆಯ್ಗೆಯಲ್ಲಿ) ತೇಲುನೆಯ್ಗೆ; ದಾಟುನೆಯ್ಗೆ; ಹೊಕ್ಕಿನ ದಾರಗಳನ್ನು ಹಾಸಿನ ಒಂದು ಭಾಗದಲ್ಲಿ, ಅದರ ದಾರಗಳ ಮಧ್ಯೆ ನೆಯ್ಯದಂತೆ ಮೇಲೆ ಹಾಯಿಸುವುದು.
  16. ದಾಟುಹೊಕ್ಕು; ತೇಲುದಾರ; ಹೀಗೆ ಹಾಯಿಸಿದ ದಾರ.
  17. (ಬ್ಯಾಂಕಿಂಗ್‍) ಇನ್ನೂ ಹಣ ವಸೂಲಾಗದೆ, ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ವರ್ಗವಾಗುವುದರಲ್ಲಿರುವ ಚೆಕ್ಕುಗಳು ಮತ್ತು ವಹಿವಾಟು ಪತ್ರಗಳು.
  18. ತೇಲುಭೂಮಿ; ಅಳತೆ ಮಾಡಿ ಬಾಂದುನೆಟ್ಟು ಗುರುತುಮಾಡದಿರುವ ಸರ್ಕಾರಿ ಜಈನಿನಿಂದ ಸರ್ಕಾರ ಮಂಜೂರು ಮಾಡುವ ನಿಗದಿಯಾದ ಭೂಮಿಯ ಭಾಗ.
  19. ಐಸ್‍ಕ್ರೀಮ್‍ ಹಾಕಿದ ರೂಟ್‍ಬಿಯರ್‍ ಮೊದಲಾದ ಪಾನೀಯ.
  20. ಸಾದಿಲ್ವಾರು ಹಣ; ಚಿಲ್ಲರೆ ಹಣ; ಸಣ್ಣಪುಟ್ಟ ಖರ್ಚಿಗಾಗಿ ಯಾ ಚಿಲ್ಲರೆ ಕೊಡುವುದಕ್ಕಾಗಿ ಮಂಜೂರು ಮಾಡಿರುವ ಹಣ.
ಪದಗುಚ್ಛ

on the float (ವಿರಳ ಪ್ರಯೋಗ) ತೇಲಾಡುತ್ತ.