See also 2bar  3bar  4bar  5bar
1bar ಬಾರ್‍
ನಾಮವಾಚಕ
  1. (ಲೋಹ, ಮರ, ಮೊದಲಾದವುಗಳ) ಬಾರು; ಉದ್ದನೆ – ತುಂಡು, ಚೂರು.
  2. (ಸೋಪು, ಚಾಕೊಲೆಟ್‍, ಮೊದಲಾದವುಗಳ) ಬಾರು; ಉದ್ದನೆ ತುಂಡು: a bar of soap ಸೋಪಿನ – ಬಾರು, ತುಂಡು. a bar of candy ಸಕ್ಕರೆ ತುಂಡು.
  3. (ಪ್ರಶಸ್ತಿಪದಕದ ಹಿಡಿಕೆಯ ಕೆಳಗೆ ಇರುವ, ವಿಶೇಷ ಗೌರವಸೂಚಕವಾದ) ಲೋಹದ ಪಟ್ಟಿ.
  4. (ಯಾವುದೇ ತಲದ ಮೇಲಿರುವ) ಬಣ್ಣ, ಬೆಳಕು, ಮೊದಲಾದವುಗಳ – ಪಟ್ಟೆ.
  5. (ವಂಶಲಾಂಛನ ವಿದ್ಯೆ) (ಗುರಾಣಿಯ ಮೇಲಣ, ಸಮತಲದಲ್ಲಿರುವ) ಅಡ್ಡ – ಗೆರೆ, ಪಟ್ಟೆ; ಎರಡು ಸಮಾಂತರ ರೇಖೆಗಳು ಯಾ ಅಗಲ ಕಡಿಮೆಯಿರುವ ಪಟ್ಟೆ. Figure: 1_bar_5
  6. (ಕಿಟಕಿ, ಬಾಗಿಲು, ಗೇಟು, ಮೊದಲಾದವುಗಳಿಗೆ ಹಾಕಿರುವ) ಸರಳು; ಸಲಾಕಿ; ಕಂಬಿ; ಅಗುಳಿ; ತಾಪಾಳು; ತಾಳ; ಲಾಳವಿಂಡಿಗೆ.
  7. (ಸುಂಕದ ಕಟ್ಟೆ ಮೊದಲಾದವುಗಳ ಬಳಿ ಪ್ರವೇಶವನ್ನು ತಡೆಯಲು ಹಾಕಿರುವ, ಯಾವುದೇ ಆಕಾರದ) ತಡೆ; ಅಡ್ಡಗಟ್ಟು; ಕಂಬಿ; ಪ್ರತಿಬಂಧಕ.
  8. (ಬಂದರಿನ ದ್ವಾರದಲ್ಲಿ, ಅಳಿವೆಯ ಮುಖದಲ್ಲಿ ಇರುವ) ಮರಳು – ದಿಬ್ಬ, ರಾಶಿ.
  9. (ಸಂಗೀತ) ದಂಡ; ಲಯರೇಖೆ; ಕೃತಿಯ ರೇಖಾಪ್ರಸ್ತಾರದಲ್ಲಿ, ಕೃತಿಯನ್ನು ಸಮವಾದ ಕಾಲಪ್ರಮಾಣ ಯಾ ತಾಳದ ಭಾಗಗಳಾಗಿ ವಿಂಗಡಿಸುವ ಲಂಬರೇಖೆ.
  10. (ಸಂಗೀತ) ಸಮವಾದ ಕಾಲಪ್ರಮಾಣವಿರುವಂತೆ ದಂಡದಿಂದ ವಿಭಾಗ ಮಾಡಿದ ಕೃತಿಯ ಭಾಗಗಳಲ್ಲಿ ಒಂದು.
  11. (ರೂಪಕವಾಗಿ, ಭಾವನಾತ್ಮಕವಾದ) ಅಡ್ಡಿ; ತಡೆ; ಪ್ರತಿಬಂಧಕ.
  12. ಕಟ್ಟು; ನಿರ್ಬಂಧ; ಪರಿಮಿತಿ.
  13. (ನ್ಯಾಯಶಾಸ್ತ್ರ) ತಕರಾರು ವಾದ; ತಡೆ; ತಡೆವಳಿ; ಕ್ರಮವನ್ನು ಯಾ ಹಕ್ಕನ್ನು ತಡೆಯುವ ವಾದ.
  14. (ನೈತಿಕ) ಅಡ್ಡಿ; ನಿರ್ಬಂಧ; ಪ್ರತಿಬಂಧ.
  15. (ನ್ಯಾಯಾಲಯದಲ್ಲಿ ಪ್ರೇಕ್ಷಕರಿಗೆ, ಸಾಕ್ಷಿಗಳಿಗೆ, ಕೈದಿಗಳಿಗೆ ಸ್ಥಳ ನಿರ್ದೇಶವನ್ನು ಮಾಡಲು ಹಾಕಿರುವ) ತಡೆ; ಅಡ್ಡಗಟ್ಟೆ; ಕಟಕಟೆ; ಕಟಾಂಜನ.
  16. ನ್ಯಾಯಾಲಯ; ನ್ಯಾಯಸ್ಥಾನ; ಕೋರ್ಟು (ರೂಪಕವಾಗಿ ಸಹ).
  17. ವಕೀಲರು; ನ್ಯಾಯವಾದಿಗಳು.
  18. ವಕೀಲವೃತ್ತಿ.
  19. (ಬ್ರಿಟಿಷ್‍ ಪ್ರಯೋಗ) (ಶಾಸನ ಸಭೆಯಲ್ಲಿ, ಕಾರ್ಯಾರ್ಥವಾಗಿ ಸದಸ್ಯರಲ್ಲದವರು ಬಂದು ನಿಲ್ಲಬಹುದಾದ ಸ್ಥಳವನ್ನು ಪ್ರತ್ಯೆಕಿಸುವ) ಕಂಬಿ.
  20. (ಹೋಟೆಲು ಮೊದಲಾದವುಗಳಲ್ಲಿ ತಿಂಡಿ ಪಾನೀಯಗಳನ್ನು ಒದಗಿಸುವ) ಮಣೆ; ಮೇಜು; ಹಲಗೆ.
  21. (ಹೋಟೆಲು ಮೊದಲಾದವುಗಳಲ್ಲಿ) ತಿಂಡಿ ಪಾನೀಯಗಳನ್ನು ಇಡುವ ಹಲಗೆಯ ಹಿಂದಿನ ಜಾಗ, ಕೋಣೆ ಯಾ ಇದನ್ನೊಳಗೊಂಡ ಕಟ್ಟಡ.
  22. ಪಾನ – ಶಾಲೆ, ಗೃಹ; ಫಲಾಹಾರ ಮಂದಿರ; ಉಪಾಹಾರ ಗೃಹ: Coffee bar ಕಾಫೀಗೃಹ.
  23. (ಬಹುವಚನದಲ್ಲಿ) (ಕಡಿವಾಣದ) ಕಟವಾಯಿ; ಕಡಿವಾಣ ಹಾಕುವ ಭಾಗ.
  24. (ಬಹುವಚನದಲ್ಲಿ) ಕಡಿವಾಣದ ಕೀಲು.
  25. = crossbar.
  26. ಕಂಬಿ; ಸರಳು; ವಿದ್ಯುತ್‍ ಒಲೆಯ ಉರಿಯುವ, ಕಾಯುವ ಭಾಗ.
  27. = bar tracery.
  28. ಬಾರ್‍; ವಿಭಾಗ; ದೊಡ್ಡ ಅಂಗಡಿಯಲ್ಲಿ ವಿಶಿಷ್ಟವಾದ ಪದಾರ್ಥದ ಯಾ ಕೆಲಸದ ವಿಭಾಗ: heel bar ಹಿಮ್ಮಡಿ ವಿಭಾಗ; ಹಿಮ್ಮಡಿಗಳನ್ನು ಮಾಡುವ ಅಂಗಡಿಯ ಭಾಗ.
ಪದಗುಚ್ಛ
  1. at(the) bar ನ್ಯಾಯಸ್ಥಾನದಲ್ಲಿ; ಕೋರ್ಟಿನಲ್ಲಿ.
  2. bar silver ಬೆಳ್ಳಿಗಟ್ಟಿ.
  3. the bar = 1bar(17, 18).
  4. the outer bar (ಬ್ರಿಟಿಷ್‍ ಪ್ರಯೋಗ) ಹೊರ ವಕೀಲರು; ಕಿಂಗ್ಸ್‍ ಕೌನ್ಸಲ್‍ ಯಾ ಕ್ವೀನ್ಸ್‍ ಕೌನ್ಸಲ್‍ ಎಂಬ ಪದವಿಯಿಲ್ಲದ, ಸಾಧಾರಣ ವಕೀಲರು.
  5. trial at bar (ಬ್ರಿಟಿಷ್‍ ಪ್ರಯೋಗ) ಪೂರ್ಣ ನ್ಯಾಯಾಲಯದ ಮುಂದೆ; ಬ್ರಿಟನ್ನಿನ ಉನ್ನತ ನ್ಯಾಯಸ್ಥಾನದ ಎಲ್ಲ ನ್ಯಾಯಾಧೀಶರ ಸಮ್ಮುಖದಲ್ಲಿ.
ನುಡಿಗಟ್ಟು
  1. bar of conscience ಆತ್ಮಸಾಕ್ಷಿಯ ನ್ಯಾಯಾಲಯ; ಅಂತಸ್ಸಾಕ್ಷಿಯ ಕಟ್ಟೆ.
  2. bar of opinion ಸಾರ್ವಜನಿಕ ಅಭಿಪ್ರಾಯ; ಜನಾಭಿಪ್ರಾಯ; ಲೋಕಾಭಿಪ್ರಾಯ.
  3. be called to the bar ನ್ಯಾಯಾವಾದಿಯಾಗಿ, ಬ್ಯಾರಿಸ್ಟರ್‍ ಆಗಿ – ಕರೆಯಲ್ಪಡು.
  4. be called within the bar (ಬ್ರಿಟನ್ನಿನಲ್ಲಿ) ರಾಜವಕೀಲನಾಗಿ ನೇಮಕವಾಗು, ನೇಮಕಗೊಳ್ಳು.
  5. behind bars ಕಂಬಿಗಳ ಹಿಂದೆ; ಸೆರೆಮನೆಯಲ್ಲಿ; ಜೈಲಿನಲ್ಲಿ.