See also 2yet
1yet ಯೆಟ್‍
ಕ್ರಿಯಾವಿಶೇಷಣ
  1. ಇನ್ನೂ; ಅ(ಇ)ದುವರೆಗೂ; ಈಗಲೂ; ಈಗ್ಗೂ; ಆಗಲೂ; ಆಗ್ಗೂ: there is yet time ಈಗಲೂ ಸಮಯವಿದೆ, ಕಾಲಾವಕಾಶವಿದೆ. is he yet living? ಅವನು ಇನ್ನೂ ಬದುಕಿರುವನೇ?
  2. (ನಿಷೇಧಾರ್ಥಸೂಚಕಗಳಲ್ಲಿ ಯಾ ಪ್ರಶ್ನಾರ್ಥಕಗಳಲ್ಲಿ) ಇನ್ನೂ: it is not time yet ಇನ್ನೂ ಹೊತ್ತಾಗಿಲ್ಲ (ಕಾಲ ಬಂದಿಲ್ಲ). I have never lied yet ನಾನು ಇನ್ನೂ (ಈ ವರೆಗೂ) ಸುಳ್ಳು ಹೇಳಿಲ್ಲ.
  3. ಜೊತೆಗೆ; ಮಾತ್ರವಲ್ಲದೆ; ಅದೂ ಅಲ್ಲದೆ: yet once more ಮತ್ತೆ ಇನ್ನೊಮ್ಮೆ.
  4. ಈಗಲೂ; ಇನ್ನೂ; ಇನ್ನುಮುಂದೆಯೂ: he will win, I will be even with you, yet ಅವನು ಗೆಲ್ಲುತ್ತಾನೆ; ನಾನು ಇನ್ನು ಮುಂದೆಯೂ ನಿನ್ನ ಸಂಗಡ ಇರುತ್ತೇನೆ.
  5. (ತರ ಭಾವದ ಗುಣವಾಚಕಗಳ ಜತೆಯಲ್ಲಿ) ಇನ್ನೂ; ಮತ್ತೂ: a yet more difficult task ಇನ್ನೂ ಕಷ್ಟತರವಾದ ಕೆಲಸ.
  6. ಉಳಿದಿರುವ ಕಾಲದಲ್ಲಿ; ಎಲ್ಲವೂ ಮುಗಿಯುವುದರ ಒಳಗೆ; ಅಷ್ಟರೊಳಗೆ: I will do it yet ಅಷ್ಟರಲ್ಲಿ ನಾನು ಅದನ್ನು ಮಾಡುತ್ತೇನೆ.
  7. ಆದಾಗ್ಯೂ; ಅದೇನೇ ಇರಲಿ: it is strange, and yet it is trueಅದು ವಿಚಿತ್ರ, ಆದಾಗ್ಯೂ, ಅದು ಸತ್ಯ.
ಪದಗುಚ್ಛ

nor yet ಅದನ್ನೂ ಇಲ್ಲ: won’t listen to me nor yet to her ನನ್ನ ಮಾತನ್ನು ಕೇಳುವುದಿಲ್ಲ, ಅವಳ ಮಾತನ್ನೂ ಸಹ (ಕೇಳುವುದಿಲ್ಲ).