See also 1un
2un- ಅನ್‍-
ಪೂರ್ವಪ್ರತ್ಯಯ

ಕ್ರಿಯಾಪದಗಳಿಗೆ, ಕೆಲವೊಮ್ಮೆ ಮಾತ್ರ ನಾಮಪದಗಳಿಗೆ, ಸೇರಿಸುವ, ಕೆಳಗೆ ಸೂಚಿಸಿರುವ ಅರ್ಥಗಳ ಕ್ರಿಯಾಪದಗಳನ್ನು ರೂಪಿಸಲು ಬಳಸುವ ಪೂರ್ವಪ್ರತ್ಯಯ.

  1. ಯಾವುದೇ ಕ್ರಿಯೆ ಯಾ ಸ್ಥಿತಿಯನ್ನು ಪೂರ್ವಸ್ಥಿತಿಗೆ ಹಿಂದಿರುಗಿಸುವುದು ಯಾ ರದ್ದುಮಾಡುವುದು: undress, unbar, unbind, unlock, unsettle.
  2. ತೆಗೆದುಹಾಕುವುದು ಯಾ ಬೇರ್ಪಡಿಸುವುದು: unmask, unfrock.
  3. (-ಇಂದ) ಬಿಡಿಸುವುದು; ಬಿಡುಗಡೆಗೊಳಿಸುವುದು: unburden, uncage, uncase, unfold.
  4. ಮುಂದೆ ಅಂತೆ ಇರದಾಗಿಸುವುದು, ಉದಾಹರಣೆಗೆ unman.