See also 2temple  3temple
1temple ಟೆಂಪ(ಪ್‍)ಲ್‍
ನಾಮವಾಚಕ
  1. ದೇವಾಲಯ; ದೇವಸ್ಥಾನ; ದೇಗುಲ; ಗುಡಿ; ಮಂದಿರ:
    1. (ಮುಖ್ಯವಾಗಿ ಪುರಾತನ ಈಜಿಪ್ಟಿನ, ಗ್ರೀಕ್‍ ರೋಮನ್‍ ಯಾ ಆಧುನಿಕ ಹಿಂದೂ, ಬೌದ್ಧ) ದೇವತಾರಾಧನ ಮಂದಿರ.
    2. (ಚರಿತ್ರೆ) (ಬೈಬಲ್‍ ಯುಗದ) ಜೆರೂಸಲೆಮಿನ ಮೂರು ಪ್ರಾಚೀನ ಯೆಹೂದ್ಯ ದೇವಾಲಯಗಳಲ್ಲೊಂದು.
  2. (ಅಮೆರಿಕನ್‍ ಪ್ರಯೋಗ) ಯೆಹೂದ್ಯರ ಆರಾಧನಾ ಸಭೆ, ಮಂದಿರ.
  3. ಕ್ರೈಸ್ತ ಸಾರ್ವಜನಿಕ ಚರ್ಚು (ಮುಖ್ಯವಾಗಿ ಹ್ರಾನ್ಸ್‍ನಲ್ಲಿನ ಪ್ರಾಟೆಸ್ಟೆಂಟ್‍ ಚರ್ಚು).
  4. (ರೂಪಕವಾಗಿ) ದೇಹ–ದೇಗುಲ, ದೇವಾಲಯ; ದೇವರ ಆವಾಸವೆಂದು ಹೇಳಲಾಗುವ ಮಾನವ, ಮುಖ್ಯವಾಗಿ ಕ್ರೈಸ್ತಧರ್ಮೀಯನ, ದೇಹ.