See also 2tear  3tear
1tear ಟೇರ್‍
ಕ್ರಿಯಾಪದ
(ಭೂತರೂಪ tore ಉಚ್ಚಾರಣೆ ಟೋರ್‍, ಭೂತಕೃದಂತ

torn ಉಚ್ಚಾರಣೆ ಟೋರ್ನ್‍).

ಸಕರ್ಮಕ ಕ್ರಿಯಾಪದ
  1. ಹರಿ; ಹರಿದುಹಾಕು; ಹರಿದು ಛಿದ್ರಛಿದ್ರ ಮಾಡು: tore up the letter ಕಾಗದವನ್ನು ಹರಿದು ಹಾಕಿದ. torn to pieces by a tiger ಒಂದು ಹುಲಿ ಅವನನ್ನು ಹರಿದು ಛಿದ್ರ ಮಾಡಿತು.
  2. ಹರಿ; ಹರಿದು–ತೂತು, ರಂಧ್ರ ಮಾಡು: have torn my coat ನನ್ನ ಕೋಟನ್ನು ಹರಿದುಕೊಂಡೆ.
  3. ಬಲಾತ್ಕಾರದಿಂದ ಕೀಳು; ಬಲವಾಗಿ ಎಳೆ; ಕಿತ್ತುಹಾಕು: tore the book away from me ಪುಸ್ತಕವನ್ನು ನನ್ನಿಂದ ಕಿತ್ತುಕೊಂಡ. tore off the cover ರಟ್ಟು ಕಿತ್ತುಹಾಕಿದ. tore the pages out ಹಾಳೆಗಳನ್ನು ಕಿತ್ತ. tore down the notice ಪ್ರಕಟನೆಯನ್ನು ಕಿತ್ತುಹಾಕಿದ.
  4. ಒಡೆ; ವಿಭಜಿಸು; ಛಿದ್ರಛಿದ್ರ ಮಾಡು: the country was torn by civil war ಅಂತರ್ಯುದ್ಧದಿಂದ ದೇಶ–ಛಿದ್ರಛಿದ್ರವಾಯಿತು, ಒಡೆದು ಚೂರುಚೂರಾಯಿತು. torn by conflicting emotions ಪರಸ್ಪರ ವಿರುದ್ಧ ಭಾವಗಳಿಂದ ಒಡೆದುಹೋದ.
ಅಕರ್ಮಕ ಕ್ರಿಯಾಪದ
  1. (ಏನನ್ನಾದರೂ ಹಿಡಿದು) ಬಲವಾಗಿ–ಎಳೆ, ಕೀಳು, ಜಗ್ಗು.
  2. (ಆಡುಮಾತು) ವೇಗದಿಂದ, ಉದ್ವೇಗದಿಂದ–ಜೋರಾಗಿ ಓಡು, ನಡೆ, ಪ್ರಯಾಮಾಡು: tore down the hill ಬೆಟ್ಟದಿಂದ ಕೆಳಕ್ಕೆ ಅತಿವೇಗದಿಂದ ನಡೆದ.
  3. ಹರಿ; ತೂತಾಗು; ಮುರಿದು, ಕಿತ್ತು, ಹರಿದು ಹೋಗು: curtain tore down the middle ಪರದೆ ಮಧ್ಯಭಾಗದಲ್ಲಿ ಹರಿಯಿತು, ತೂತಾಯಿತು.
ಪದಗುಚ್ಛ
  1. tear apart
    1. (ಒಂದು ಸ್ಥಳವನ್ನು) ಆಮೂಲಾಗ್ರವಾಗಿ, ಕೂಲಂಕಷವಾಗಿ ಶೋಧಿಸು.
    2. (ವಾದ ಮೊದಲಾದವನ್ನು) ಛಿದ್ರಛಿದ್ರಮಾಡು; ಹರಿದು ಚಿಂದಿಮಾಡು; ತೀವ್ರವಾಗಿ–ಖಂಡಿಸು, ಟೀಕಿಸು.
  2. be torn between (ಯಾವುದೇ ಎರಡರ ನಡುವೆ ಒಂದನ್ನು) ಆಯ್ಕೆ ಮಾಡಲು–ಕಷ್ಟವಾಗಿರು, ತೊಂದರೆಪಡು, ತೂಗಾಡುತ್ತಿರು.
  3. tear into
    1. ವಾಗ್ದಾಳಿ ನಡಸು; ಖಂಡಿಸು; ಮಾತಿನಲ್ಲಿ–ಎರಗು, ಆಕ್ರಮಣ ಮಾಡು.
    2. (ಕಾರ್ಯಾಚರಣೆ ಯೊಂದನ್ನು) ಬಿರುಸಾಗಿ–ಆರಂಭಿಸು, ಶುರು ಮಾಡು.
  4. tear it ಹಾಳು ಮಾಡು; ವ್ಯರ್ಥವಾಗಿಸು: that’s torn it (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಅದು ಯೋಜನೆಯನ್ನು ಹಾಳು ಮಾಡಿತು, ಸಮಸ್ಯೆ ಹುಟ್ಟಿಸಿತು, ಮೊದಲಾದ.
  5. tear oneself away ಒಲ್ಲದ ಮನಸ್ಸಿನಿಂದ ಹೊರಡು, ಬಲಾತ್ಕಾರದಿಂದ ಸ್ಥಳ ಬಿಟ್ಟು ಕದಲು.
  6. tear one’s hair out (ಅತ್ಯಂತ ಕೋಪ, ದಿಗ್ಭ್ರಮೆ ಅಥವಾ ನಿರಾಶೆಯಿಂದ) ವರ್ತಿಸು.
  7. tear to shreads (ಆಡುಮಾತು)
    1. ಚಿಂದಿ ಚಿಂದಿ ಮಾಡು; ಹರಿದು ಚೂರುಚೂರು ಮಾಡು.
    2. (ವಾದ, ವ್ಯಕ್ತಿ, ಮೊದಲಾದವರನ್ನು) ಚಿಂದಿಯೆಬ್ಬಿಸು; ತೀವ್ರವಾಗಿ, ಪೂರ್ಣವಾಗಿ–ಖಂಡಿಸು ಯಾ ಟೀಕಿಸು.