See also 2tally
1tally ಟ್ಯಾಲಿ
ನಾಮವಾಚಕ
(ಬಹುವಚನ tallies).
  1. (ಚರಿತ್ರೆ) ತಾಳೆ ಲೆಕ್ಕದ–ಕಡ್ಡಿ, ಕೋಲು.
    1. ಲೆಕ್ಕದ ಬಾಬಉಗಳಿಗೆ ತಕ್ಕ ಕಚ್ಚುಗಳನ್ನು ಗುರುತಿಸಿ, ಬಳಿಕ ಉದ್ದಕ್ಕೆ ಎರಡಾಗಿ ಸೀಳಿ ಸಾಲಿಗ-ಸಾಲಗಾರರಿಬ್ಬರೂ ಒಂದೊಂದನ್ನು ಇಟ್ಟುಕೊಳ್ಳುತ್ತಿದ್ದ ಲೆಕ್ಕದ ಕೋಲು, ಕಡ್ಡಿ.
    2. (ಹೀಗೆ ತೆಗೆದುಕೊಂಡ) ತಾಳೆಕೋಲಿನ ಲೆಕ್ಕ.
    1. ತಂಡ ಗುರುತು; ಕೊಟ್ಟ ಯಾ ತೆಗೆದುಕೊಂಡ ನಿರ್ದಿಷ್ಟ ಸಂಖ್ಯೆಯ (ಉದಾಹರಣೆಗೆ 12; 100) ವಸ್ತುಗಳನ್ನು ಸೂಚಿಸಲು ಮಾಡಿದ ಗುರುತು.
    2. ತಂಡಸಂಖ್ಯೆ; ಏಕಮಾನವಾಗಿ ಉಪಯೋಗಿಸುವ (ಡಜನ್ನು, ನೂರು, ಮೊದಲಾದ) ಸಂಖ್ಯೆ.
  2. ಹೆಸರು ಬಿಲ್ಲೆ; ಗುರುತು ಚೀಟಿ; ಪದಾರ್ಥ ಗುರುತಿಸಲು ಕಟ್ಟಿದ, ಅದರ ಹೆಸರು ಮೊದಲಾದವುಗಳಿರುವ ರಟ್ಟು, ಲೋಹ, ಮೊದಲಾದವುಗಳ ತಗಡು, ಬಿಲ್ಲೆ.
  3. (ಸಂವಾದಿಯಾದ)ಜೋಡಿ; ಜೊತೆ; ದುಪ್ರತಿ; ಜವಾಬಾದುದು.
  4. ಸಾಲ ಯಾ ಗೆಲ್ಲಂಕವನ್ನು ಎಣಿಕೆ ಮಾಡುವಿಕೆ.
  5. ಒಟ್ಟು ಗೆಲ್ಲಂಕ ಯಾ ಗೆಲ್ಲಂಕಗಳ ಮೊತ್ತ.
ಪದಗುಚ್ಛ

buy goods by the tally (ಡಸನ್‍, ನೂರು, ಹೀಗೆ) ತಂಡಗಟ್ಟಲೆ ಪದಾರ್ಥಗಳನ್ನು ಕೊಳ್ಳು.