2scapular
ನಾಮವಾಚಕ
- (ಕ್ರೈಸ್ತಧರ್ಮ) (ಪಾದ್ರಿಗಳು ಹೆಗಲ ಮೇಲೆ ಧರಿಸುವ) ಕಿರು ಭುಜ – ಕವಚ, ವಸ್ತ್ರ.
- (ರೋಮನ್ ಕ್ಯಾಥೊಲಿಕ್) ಸಂನ್ಯಾಸಿ ವರ್ಗಕ್ಕೆ ಸೇರಿಸಲ್ಪಟ್ಟ ಕುರುಹಾಗಿ ಹೆಗಲ ಮೇಲೆ ಕಟ್ಟಿ ಎದೆಯ ಮೇಲೂ ಬೆನ್ನಿನ ಮೇಲೂ ಇಳಿಯಬಿಟ್ಟುಕೊಳ್ಳುವ ಎರಡು ಹೆಗಲ ಪಟ್ಟಿಗಳು, ಭುಜಪಟ್ಟಿಗಳು.
- ಹೆಗಲ – ಪಟ್ಟಿ, ಬ್ಯಾಂಡೇಜು; ಹೆಗಲಿಗೆ ಹಾಕುವ ಯಾ ಹೆಗಲ ಮೇಲಿಂದ ತೂಗಹಾಕುವ ಬ್ಯಾಂಡೇಜು ಪಟ್ಟಿ.
- ರೆಕ್ಕೆಯ ಸಂದಿನ ಗರಿ.