See also 1rouse  3rouse  4rouse
2rouse ರೌಸ್‍
ಸಕರ್ಮಕ ಕ್ರಿಯಾಪದ
  1. (ಬೇಟೆಯನ್ನು ಇಕ್ಕೆಯಿಂದ, ಮರಸಿನಿಂದ) ಹೊರಹೊರಡಿಸು; ಎಬ್ಬಿಸು.
  2. (ನಿದ್ರೆಯಿಂದ) ಎಬ್ಬಿಸು; ಎಚ್ಚರಿಸು; ಎಚ್ಚರಮಾಡು.
  3. (ಆಲಸ್ಯ, ಅಲಕ್ಷ್ಯ ಮೊದಲಾದವುಗಳಿಂದ) ಎಚ್ಚರಗೊಳಿಸು; ಉತ್ತೇಜಿಸು; ಹುರಿದುಂಬಿಸು; ಪ್ರೋತ್ಸಾಹಿಸು; ಕಾವೇರಿಸು.
  4. ಕೆರಳಿಸು; ರೇಗಿಸು; ಉದ್ರೇಕಗೊಳಿಸು; ಸಿಟ್ಟಿಗೆಬ್ಬಿಸು: is terrible when roused ಕೆರಳಿಸಿದಾಗ ಭಯಂಕರವಾಗುತ್ತಾನೆ.
  5. (ಭಾವನೆಗಳನ್ನು) ಎಬ್ಬಿಸು; ಪ್ರಚೋದಿಸು; ಬರಿಸು.
  6. (ದ್ರವವನ್ನು, ಮುಖ್ಯವಾಗಿ ಬಿಯರ್‍ ಮದ್ಯವನ್ನು, ಮಾಡುವಾಗ) ಕಲಕು; ತೊಳಸು.
  7. (ನೌಕಾಯಾನ) ಬಲವಾಗಿ ಎಳೆ; ಜೋರಾಗಿ ಎಳೆ.
ಅಕರ್ಮಕ ಕ್ರಿಯಾಪದ
  1. (ನಿದ್ರೆ ಬಿಟ್ಟು) ಏಳು; ಎಚ್ಚರಗೊಳ್ಳು; ಎದ್ದೇಳು
  2. ಚುರುಕಾಗು; ಕಾರ್ಯಪ್ರತ್ತನಾಗು.
ಪದಗುಚ್ಛ
  1. a rousing song ಹುರಿದುಂಬಿಸುವ ಹಾಡು.
  2. rouse oneself ಆಲಸ್ಯ ಬಿಟ್ಟು ಏಳು.
  3. wants rousing ಸೋಮಾರಿಯಾಗಿದ್ದಾನೆ; ಅಲಸನಾಗಿದ್ದಾನೆ; ಎಬ್ಬಿಸಬೇಕಾಗಿದೆ.