robust ರೋಬಸ್ಟ್‍
ಗುಣವಾಚಕ
( ತರರೂಪ robuster ತಮರೂಪ\ robustest).
  1. (ವ್ಯಕ್ತಿ, ಪ್ರಾಣಿ, ಸಸ್ಯ, ದೇಹ, ಆರೋಗ್ಯ ಮೊದಲಾದವುಗಳ ವಿಷಯದಲ್ಲಿ) ದಷ್ಟಪುಷ್ಟ; ದೃಢಕಾಯದ; ದೇಹದಾರ್ಢ್ಯವುಳ್ಳ; ಗಟ್ಟಿಮುಟ್ಟಾದ; ಕಟ್ಟುಮಸ್ತಾದ.
  2. (ವ್ಯಾಯಾಮ, ಶಿಸ್ತು, ಮೊದಲಾದ) ಹುರುಪಿನ; ಶಕ್ತಿ ಆವಶ್ಯಕವಾದ; ಕಷ್ಟಪಟ್ಟು ಮಾಡಬೇಕಾದ.
  3. (ಬುದ್ಧಿ ಮೊದಲಾದವು) ಸ್ಫುಟವಾದ; ಪ್ರಗಲ್ಭ; ವೀರ್ಯವತ್ತಾದ; ನೇರವಾದ; ಋಜು; ಸೂಕ್ಷ್ಮತಿರೇಕಗಳಿಂದ ತುಂಬಿರದ ಯಾ ಗೊಂದಲಗೊಂಡಿರದ.
  4. (ಹೇಳಿಕೆ, ಉತ್ತರ ಮೊದಲಾದವುಗಳ ವಿಷಯದಲ್ಲಿ) ದಿಟ್ಟ; ದೃಢವಾದ; ಬಗ್ಗದ.
  5. (ಮದ್ಯ ಮೊದಲಾದವುಗಳ ವಿಷಯದಲ್ಲಿ) ಬಹಳ ಸಾರವತ್ತಾದ.