ribbon ರಿಬನ್‍
ನಾಮವಾಚಕ
  1. ರಿಬ್ಬನ್ನು:
    1. (ಮುಖ್ಯವಾಗಿ ಉಡುಪುಗಳ ಅಲಂಕಾರಕ್ಕಾಗಿ ಉಪಯೋಗಿಸುವ, ರೇಷ್ಮೆಯ, ಸ್ಯಾಟಿನ್ನಿನ ಯಾ ಇತರ ಬಟ್ಟೆಯ) ನೇಯ್ದ ಪಟ್ಟಿ; ಅಲಂಕಾರ ಪಟ್ಟಿ; ಕಟ್ಟುವ ಪಟ್ಟಿ.
    2. ಅಂಥ ಅಲಂಕಾರಪಟ್ಟಿಯ ರೇಷ್ಮೆ ಯಾ ಸ್ಯಾಟಿನ್‍ ಬಟ್ಟೆ.
    3. (‘ನೈಟ್‍’ ಪದವೀಧರ ಶ್ರೇಣಿ, ಸಂಘ, ಕಾಲೇಜು, ಕಸರತ್ತುಗಾರರ ತಂಡ ಮೊದಲಾದವುಗಳ ಸದಸ್ಯತ್ವವನ್ನು ಸೂಚಿಸಲು ಧರಿಸುವ) ಬಿರುದುಪಟ್ಟಿ; ವಿಶಿಷ್ಟ ಬಣ್ಣದ ಗುರುತುಪಟ್ಟಿ.
    4. ಕಿರಿಯಗಲದ ಉದ್ದನೆಯ ಪಟ್ಟಿ.
    5. ಪಟ್ಟಿಯ ಹಾಗಿರುವ ವಸ್ತು ಯಾ ಗುರುತು.
    6. (ಬಹುವಚನದಲ್ಲಿ) ಲಗಾಮು.
  2. (ಬಹುವಚನದಲ್ಲಿ) ಚಿಂದಿ ತುಂಡುಗಳು: torn to ribbons ಚಿಂದಿ ತುಂಡುಗಳಾಗಿ ಹರಿಯಲಾಯಿತು.
ಪದಗುಚ್ಛ
  1. handle (or take) the ribbons ಲಗಾಮು ಹಿಡಿ; ಲಗಾಮು ಹಿಡಿದು ಬಂಡಿ, ಕುದುರೆ ನಡೆಸು.
  2. hang in ribbons ಚಿಂದಿಚಿಂದಿಯಾಗಿ ತೂಗಾಡು.