1reversible
ರಿವರ್ಸಿ(ರ್ಸ)ಬ್ಲ್
ಗುಣವಾಚಕ
- ಹಿಮ್ಮೊಗ ಯಾ ಮೇಲ್ಮೊಗ–ಮಾಡಬಲ್ಲ, ಆಗಬಲ್ಲ.
- ಒಳಹೊರಗು–ಮಾಡಬಲ್ಲ, ಆಗಬಲ್ಲ.
- ತಲೆಕೆಳಗು–ಮಾಡಬಲ್ಲ, ಆಗಬಲ್ಲ.
- ಹಿಂದುಮುಂದು–ಮಾಡಬಲ್ಲ, ಆಗಬಲ್ಲ.
- ಪೂರ್ವಸ್ಥಿತಿಗೆ–ತರಬಲ್ಲ, ಬರಬಲ್ಲ; ವ್ಯತ್ಯಾಸ–ಮಾಡಬಲ್ಲ, ಆಗಬಲ್ಲ.
- (ವಾಹನ, ಎಂಜಿನ್ ವಿಷಯದಲ್ಲಿ) ಹಿಂದಕ್ಕೆ–ನಡೆಸಬಲ್ಲ, ಹೋಗಬಲ್ಲ; ಹಿಂಚಲನ, ಹಿಂಚಾಲನ–ಸಾಧ್ಯ.
- (ನ್ಯಾಯಶಾಸ್ತ್ರ) (ತೀರ್ಪು ಮೊದಲಾದವುಗಳ ವಿಷಯದಲ್ಲಿ) ರದ್ದು–ಮಾಡಬಲ್ಲ, ಆಗಬಲ್ಲ.
- (ಮುಖ್ಯವಾಗಿ ವಾಲ್ಟ್ಸ್ ತ್ಯ, ನರ್ತಕಿಯ ವಿಷಯದಲ್ಲಿ) ಪ್ರತಿಮುಖವಾಗಿ ಸುತ್ತಬಲ್ಲ.
- (ಬಟ್ಟೆಯ ವಿಷಯದಲ್ಲಿ) ತಿರುವು ನೇಯ್ಗೆಯ; ತಿರುವು ಅಚ್ಚಿನ:
- ಎರಡು ಮಗ್ಗುಲುಗಳೂ ಒಂದೇ ತೆರನಾಗಿರುವಂತೆ ನೇಯ್ದಿರುವ ಯಾ ಅಚ್ಚೊತ್ತಿರುವ; ಎರಡು ಮಗ್ಗುಲೂ ಒಂದೇ ಸಮನಾಗಿರುವ.
- ತಿರುಗಿಸಿ ಉಡಬಲ್ಲ; ಯಾವುದೇ ಮಗ್ಗುಲು ಹೊರಗೆ ಕಾಣುವಂತೆ ಧರಿಸಬಲ್ಲ.