See also 2resume
1resume ರಿಸ್ಯೂಮ್‍
ಸಕರ್ಮಕ ಕ್ರಿಯಾಪದ
  1. (ವಶತಪ್ಪಿ ಹೋಗಿರುವುದನ್ನು ಯಾ ಕೊಟ್ಟುಬಿಟ್ಟದ್ದನ್ನು) ಮತ್ತೆ ವಶಪಡಿಸಿಕೊ ಯಾ ಹಿಂತೆಗೆದುಕೊ; ಪುನಃಗಳಿಸಿಕೊ; ಮರುಸ್ವಾಧೀನ ಮಾಡಿಕೊ; ಪುನರ್ವಶಪಡಿಸಿಕೊ: resume one’s territory (ವಶ ತಪ್ಪಿಹೋಗಿದ್ದ) ತನ್ನ ಪ್ರದೇಶವನ್ನು ಪುನಃ ವಶಪಡಿಸಿಕೊ. resume the grant given earlier ಹಿಂದೆ ಕೊಟ್ಟಿದ್ದ ಅನುದಾನವನ್ನು ಹಿಂತೆಗೆದುಕೊ. resume one’s spirits (ಕಳೆದುಕೊಂಡಿದ್ದ) ಉಲ್ಲಾಸವನ್ನು ಮತ್ತೆ ಪಡೆದುಕೊ. resume one’s liberty (ಕಳೆದುಕೊಂಡಿದ್ದ) ಸ್ವಾತಂತ್ರ್ಯವನ್ನು ಪುನಃ ಪಡೆದುಕೊ. resume one’s seat ತನ್ನ ಆಸನವನ್ನು, ಸ್ಥಾನವನ್ನು ಮತ್ತೆ ಪಡೆ, ಅಲಂಕರಿಸು.
  2. (ನಿಲ್ಲಿಸಿದ್ದ ಕೆಲಸ, ಭಾಷಣ, ಯಾ ಬಳಕೆಯನ್ನು) ಮತ್ತೆ ಶುರುಮಾಡು; ಪುನರಾರಂಭಿಸು ( ಅಕರ್ಮಕ ಕ್ರಿಯಾಪದ ಸಹ): the House resumed its proceedings ಶಾಸನಸಭೆ ತನ್ನ ಕಾರ್ಯಕಲಾಪಗಳನ್ನು ಪುನಃ ಆರಂಭಿಸಿತು. he resumed the thread of his discourse ಆತನು ತನ್ನ ಪ್ರವಚನದ ಎಳೆಯನ್ನು ಬಿಟ್ಟಲ್ಲಿಂದ ಪುನರಾರಂಭಿಸಿದ, ಮುಂದುವರಿಸಿದ.
  3. (ವಿಷಯವನ್ನು) ಸಂಗ್ರಹಿಸಿ ಹೇಳು; (ವಿಷಯದ) ಸಾರಾಂಶಹೇಳು.