See also 2render
1render ರೆಂಡರ್‍
ಸಕರ್ಮಕ ಕ್ರಿಯಾಪದ
  1. ಪ್ರತಿಯಾಗಿ ಕೊಡು, ಮಾಡು, ಸಲ್ಲಿಸು, ಅರ್ಪಿಸು: render thanks ಕೃತಜ್ಞತೆ ಸಲ್ಲಿಸು. render good for evil ಕೆಡುಕಿಗೆ ಪ್ರತಿಯಾಗಿ ಒಳಿತನ್ನು ಮಾಡು.
  2. (ಸಹಾಯ) ನೀಡು; ಕೊಡು: rendered aid to the injured man ಗಾಯಾಳಿಗೆ ಸಹಾಯನೀಡಿದ.
  3. (ಪ್ರಾಚೀನ ಪ್ರಯೋಗ)
    1. ಸಲ್ಲಿಸು; ಅರ್ಪಿಸು: render unto Caesar the things that are Caesar’s ಸೀಸರನಿಗೆ, ಸಾರ್ವಭೌಮನಿಗೆ, ಸಲ್ಲಬೇಕಾದುದನ್ನು ಸೀಸರನಿಗೆ, ಸಾರ್ವಭೌಮನಿಗೆ ಸಲ್ಲಿಸು.
    2. ಬಿಟ್ಟುಕೊಡು; ಹೊರಗೆಡಹು; ಹೊರಕ್ಕೆ ಎಸೆ: the grave renders up its dead ಸಮಾಧಿಯು ಮೃತರನ್ನು (ಹೊರಕ್ಕೆ) ಬಿಟ್ಟುಕೊಡುತ್ತದೆ.
    3. (ಮುಖ್ಯವಾಗಿ ಪ್ರಾಚೀನ ಪ್ರಯೋಗ) (ವಿಜೇತರಿಗೆ ಪ್ರದೇಶ ಮೊದಲಾದವನ್ನು) ಒಪ್ಪಿಸು; ಒಪ್ಪಿಸಿಬಿಡು: the fortress was rendered on terms ಆ ಕೋಟೆಯನ್ನು ಕೆಲವು ಷರತ್ತುಗಳ ಮೇಲೆ (ವಿಜೇತರಿಗೆ) ಒಪ್ಪಿಸಿಬಿಡಲಾಯಿತು.
  4. (ಕಪ್ಪ, ಕಾಣಿಕೆ ಮೊದಲಾದವನ್ನು) ಸಲ್ಲಿಸು; ಒಪ್ಪಿಸು; ಅರ್ಪಿಸು.
  5. (ವಿಧೇಯತೆ ಮೊದಲಾದವನ್ನು) ತೋರಿಸು.
  6. (ಲೆಕ್ಕಾಚಾರ, ವಿವರಣೆ ಮೊದಲಾದವನ್ನು ಪರಿಶೀಲನೆಗಾಗಿ) ಒಪ್ಪಿಸು; ಮುಂದಿಡು; ಮಂಡಿಸು: I have to render an account of the sales ಮಾರಾಟಗಳ ಲೆಕ್ಕವನ್ನು ನಾನು ಒಪ್ಪಿಸಬೇಕು.
  7. (ಚಿತ್ರಣದಲ್ಲಿ ಯಾ ಶಿಲ್ಪದಲ್ಲಿ ಮುಖಭಾವ ಮೊದಲಾದವನ್ನು) ಮೂಡಿಸು; ಚಿತ್ರಿಸು.
  8. (ಕಾವ್ಯ ಮೊದಲಾದವುಗಳಲ್ಲಿ ಭಾವ ಮೊದಲಾದವನ್ನು) ಅಭಿವ್ಯಕ್ತಗೊಳಿಸು; ನಿರೂಪಿಸು; ಪ್ರಕಾಶಪಡಿಸು: poetry cannot be rendered adequately in another language ಕಾವ್ಯವನ್ನು ಅನ್ಯಭಾಷೆಯಲ್ಲಿ ಸಮರ್ಪಕವಾಗಿ ಅಭಿವ್ಯಕ್ತಗೊಳಿಸಲಾಗುವುದಿಲ್ಲ; ಕಾವ್ಯವನ್ನು ಅನ್ಯಭಾಷೆಗೆ ಸಮರ್ಪಕವಾಗಿ ತರ್ಜುಮೆ ಮಾಡಲಾಗುವುದಿಲ್ಲ.
  9. ಅನುವಾದಿಸು; ತರ್ಜುಮೆ ಮಾಡು; ಭಾಷಾಂತರಿಸು: rendered the poem into Kannada ಆ ಪದ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ.
  10. (ನಾಟಕದ ವಿಷಯದಲ್ಲಿ) ಪ್ರದರ್ಶಿಸು; ಅಭಿನಯಿಸು: Iago was well rendered by the actor ಆ ನಟನು ಇಯಾಗೊ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ.
  11. (ಕರ್ಮಪದ ಮತ್ತು ಕರ್ಮಪೂರಕಗಳೊಡನೆ)
    1. ಮಾಡಿಸು; ಮಾಡುವಂತೆ ಪ್ರೇರಿಸು: age has rendered him peevish ಮುಪ್ಪು ಅವನನ್ನು ಸಿಡುಕನನ್ನಾಗಿ ಮಾಡಿದೆ, ಸಿಡುಕನನ್ನಾಗಿಸಿದೆ.
  12. (ತುಪ್ಪ, ಎಣ್ಣೆ, ಕೊಬ್ಬು ಮೊದಲಾದವುಗಳ ವಿಷಯದಲ್ಲಿ) (ದ್ರವವಾಗಿಸಲು) ಕರಗಿಸು ಯಾ ಕರಗಿಸಿ ತೆಗೆ: render down ಕರಗಿಸಿ ತೆಗೆ; ಕರಗಿಸಿ ಎಣ್ಣೆಯ ರೂಪಕ್ಕೆ ತರು.
  13. (ಕಲ್ಲಿನ ಯಾ ಇಟ್ಟಿಗೆಯ ಗೋಡೆ ಮೊದಲಾದವಕ್ಕೆ) ಮೊದಲನೆಯ ಗಿಲಾವು ಮಾಡು; ಗಿಲಾವಿನ ಮೊದಲ ಲೇಪ ಬಳಿ.
  14. (ಸಂಗೀತ) (ಕೃತಿಯನ್ನು) ಹಾಡು ಯಾ ವಾದನಮಾಡು.
ಪದಗುಚ್ಛ

account rendered ಬೆಲೆಪಟ್ಟಿ ಸಲ್ಲಿಸಿದೆ; (ಸರಕುಗಳು ಮತ್ತು ಬೆಲೆಗಳ ಪಟ್ಟಿಯನ್ನು ಮತ್ತೆ ಕಳುಹಿಸುವುದನ್ನು ತಪ್ಪಿಸಲು ಬಳಸುವ ಮುದ್ರಿತ ಸೂತ್ರ) ಸರಕುಗಳ, ಬೆಲೆಗಳ ಪಟ್ಟಿಯನ್ನು ಆಗಲೇ ಒಪ್ಪಿಸಿದೆ (ಎಂಬ ಒಕ್ಕಣೆ).