See also 2remit
1remit ರಿಮಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ remitted; ವರ್ತಮಾನ ಕೃದಂತ remitting).
  1. (ದೇವತಾಶಾಸ್ತ್ರ) (ಸಾಮಾನ್ಯವಾಗಿ ದೇವರ ವಿಷಯದಲ್ಲಿ, ಪಾಪ, ಪಾತಕ ಮೊದಲಾದವನ್ನು) ಕ್ಷಮಿಸು; ಮನ್ನಿಸು.
  2. (ತೆರಬೇಕಾದ ಸಾಲ, ತೆರಿಗೆ, ದಂಡ, ಯಾ ಅನುಭವಿಸಬೇಕಾದ ಶಿಕ್ಷೆ ಮೊದಲಾದವನ್ನು) ಮಾಫ್‍ಮಾಡು ಯಾ ತಗ್ಗಿಸು.
  3. (ಬಲ, ಪರಿಣಾಮ, ಪ್ರಮಾಣ, ರಭಸ ಮೊದಲಾದವನ್ನು) ತಗ್ಗಿಸು; ಇಳಿಸು: remit one’s anger ತನ್ನ ಕೋಪವನ್ನು ತಗ್ಗಿಸು.
  4. (ಒಂದು ವಿಷಯವನ್ನು ತೀರ್ಮಾನಿಸುವುದು, ಜಾರಿಗೆ ತರುವುದು, ಮೊದಲಾದವಕ್ಕಾಗಿ) ಯಾರೋ ಒಬ್ಬ ಅಧಿಕಾರಿಗೆ–ವಹಿಸು, ಕಳುಹಿಸು, ವರ್ಗಾಯಿಸು.
  5. (ನ್ಯಾಯಶಾಸ್ತ್ರ) ವ್ಯಾಜ್ಯವನ್ನು ಪುನರ್ವಿಚಾರಣೆಗಾಗಿ ಕೆಳಕೋರ್ಟಿಗೆ–ವಾಪಸುಹಾಕು, ಮತ್ತೆ ಕಳುಹಿಸಿಕೊಡು.
  6. (ಒಂದು ವಿಷಯವನ್ನು ಯಾ ವ್ಯಕ್ತಿಯನ್ನು) ಹಿಂದಿನ ಸ್ಥಿತಿಗೆ ಕಳುಹಿಸು.
  7. (ವಿಷಯವನ್ನು–ರವರೆಗೆ) ಮುಂದಕ್ಕೆ–ಹಾಕು, ತಳ್ಳು.
  8. (ಹಣ ಮೊದಲಾದವನ್ನು ಟಪಾಲಿನ ಮೂಲಕ)
    1. ರವಾನೆಮಾಡು; ಕಳುಹಿಸು.
    2. ರವಾನೆಯಾಗುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಬಲ, ಪರಿಣಾಮ, ಪ್ರಮಾಣ, ರಭಸ ಮೊದಲಾದವುಗಳ ವಿಷಯದಲ್ಲಿ)
    1. ಇಳಿ; ತಗ್ಗು: the pain begins to remit ನೋವು ಇಳಿಯತೊಡಗುತ್ತದೆ.
    2. (ಭಾಗಶಃ ಯಾ ಪೂರ್ತಿ) ಹೊರಟು ಹೋಗು; ಇಲ್ಲದಾಗು.
  2. (ಹಣ ಮೊದಲಾದವುಗಳ ವಿಷಯದಲ್ಲಿ, ಟಪಾಲಿನ ಮೂಲಕ) ರವಾನೆಯಾಗು.