2radiate
ರೇಡಿಏಟ್
ಸಕರ್ಮಕ ಕ್ರಿಯಾಪದ
- (ಬೆಳಕಿನ ಯಾ ತಾಪದ ಕಿರಣಗಳನ್ನು) ಹೊರಸೂಸು; ಹರಡು; ಪ್ರಸರಿಸು; ವಿಕಿರಣಗೊಳಿಸು.
- (ವಿದ್ಯುತ್ಕಾಂತ ತರಂಗಗಳನ್ನು) ಸೂಸು; ಹರಡು; ವಿಕಿರಣಗೊಳಿಸು.
- (ಬೆಳಕನ್ನು ಯಾ ತಾಪವನ್ನು) ಕೇಂದ್ರದಿಂದ ಹೊರಸೂಸು, ಹರಡು, ಪ್ರಸರಿಸು.
- (ಚೈತನ್ಯ, ಪ್ರೇಮ, ಆನಂದ ಮೊದಲಾದವನ್ನು) ಬೀರು; ಹರಡು.
ಅಕರ್ಮಕ ಕ್ರಿಯಾಪದ
- (ಬೆಳಕಿನ ಯಾ ತಾಪದ ಕಿರಣಗಳ ವಿಷಯದಲ್ಲಿ) ಹೊರಸೂಸು; ಹರಡು; ಪ್ರಸರಿಸು; ವಿಕಿರಣಗೊಳ್ಳು.
- (ವಿದ್ಯುತ್ಕಾಂತ ತರಂಗಗಳ ವಿಷಯದಲ್ಲಿ) ಸೂಸು; ಹರಡು; ವಿಕಿರಣವಾಗು.
- ಅಪಸರಣಗೊಳ್ಳು; ಕೇಂದ್ರದಿಂದ ಹೊರಟು ಹರಡುತ್ತಾ ಹೋಗು.