See also 2practice
1practice ಪ್ರಾಕ್ಟಿಸ್‍
ನಾಮವಾಚಕ
  1. ಅಭ್ಯಾಸ; ಚಾಳಿ; ರೂಢಿಯಾಗಿ ಹೋಗುವ ಕೆಲಸ, ನಡೆವಳಿಕೆ; ವಾಡಿಕೆ ಮಾಡಿಕೊಂಡಿರುವ ಕಾರ್ಯ; ಪರಿಪಾಠ: the practice of advertising ಜಾಹೀರಾತು ಮಾಡುವ ಪರಿಪಾಠ. makes a practice of cheating ಮೋಸಮಾಡುವ ಚಾಳಿ ಮಾಡಿಕೊಂಡಿದ್ದಾನೆ.
  2. ಕಾನೂನಿನ ಕಾರ್ಯಕ್ರಮದ ವಿಧಾನ; ಕಾನೂನಿನಂತೆ ಮೊಕದ್ದಮೆ ಮೊದಲಾದವನ್ನು ನಡೆಸುವ ರೀತಿ.
  3. ಅಭ್ಯಾಸ; ರೂಢಿ; ಪದ್ಧತಿ; ಬಳಕೆ; ಸಂಪ್ರದಾಯ; ವಾಡಿಕೆ; ಅನುಷ್ಠಾನ: has been the regular practice ಉದ್ದಕ್ಕೂ ನಡೆಸುತ್ತಿರುವ ಪದ್ಧತಿಯಾಗಿ ಬಂದಿದೆ.
  4. (ಕಲೆ, ಕಸಬು, ಮೊದಲಾದವುಗಳ ವಿಷಯದಲ್ಲಿ) (ಕೌಶಲ ಸಂಪಾದಿಸಲು ಮತ್ತೆ ಮತ್ತೆ ಮಾಡುವ) ಅಭ್ಯಾಸ; ತಾಲೀಮು: practice makes perfect ಅಭ್ಯಾಸವೇ ಪರಿಪೂರ್ಣತೆಗೆ ಸಾಧನ; ಅಭ್ಯಾಸವೇ ಪರಿಪಕ್ವತೆಗೆ ಕಾರಣ.
  5. ಅಭ್ಯಾಸಕಾಲ; ಅಭ್ಯಾಸಮಾಡುತ್ತಿರುವ ಅವಧಿ: ball practice ಚೆಂಡಾಟದ ಅಭ್ಯಾಸಕಾಲ.
  6. (ವಕೀಲ, ವೈದ್ಯ, ಮೊದಲಾದವರ) ವೃತ್ತಿ, ಉದ್ಯೋಗ ಯಾ ವ್ಯವಹಾರ: has a large practice ಅವನ ವೃತ್ತಿ ಚೆನ್ನಾಗಿ ನಡೆಯುತ್ತಿದೆ; ಅವನ ವೃತ್ತಿ ತುಂಬಾ ವ್ಯಾಪಕವಾಗಿದೆ.
  7. (ಪ್ರಾಚೀನ ಪ್ರಯೋಗ) ಹೂಟ; (ಸಾಮಾನ್ಯವಾಗಿ ಗುಪ್ತವಾದ) ಸಂಚು; ಪಿತೂರಿ; ಕುಟಿಲ ತಂತ್ರ.
  8. (ಮುಖ್ಯವಾಗಿ ವಿಶಿಷ್ಟ ರೀತಿಯ) ಕ್ರಮ; ಕಾರ್ಯರೀತಿ: bad practice ಕೆಟ್ಟಕಾರ್ಯ ರೀತಿ.
  9. (ತಾತ್ತ್ವಿಕ ಚಿಂತನೆಗೆ ವಿರುದ್ಧವಾಗಿ) ಕ್ರಿಯೆ; ಕಾರ್ಯ; ಆಚರಣೆ; ಅನುಷ್ಠಾನ.
  10. (ಅಂಕಗಣಿತ) ರೂಢಿ ಗಣಿತ; ಸರಕುಗಳ ಪ್ರಯಾಣ ಯಾ ಬೆಲೆ ಯಾ ಎರಡೂ ಬೇರೆ ಬೇರೆ ಮಾನಗಳಲ್ಲಿರುವಾಗ ನಿರ್ದೇಶಿಸಿದಷ್ಟು ಸರಕುಗಳ ಬೆಲೆಯನ್ನು ನಿಗದಿಯಾದ ದರದ ಮೇರೆಗೆ ಕಂಡುಹಿಡಿಯುವ ಸುಲಭ ರೀತಿ.
ಪದಗುಚ್ಛ
  1. in practice
    1. ಬಳಕೆಯಲ್ಲಿ; ಅಭ್ಯಾಸದಲ್ಲಿ.
    2. ಕಾರ್ಯತಃ; ವ್ಯಾವಹಾರಿಕ ದೃಷ್ಟಿಯಿಂದ: quite useless in practice ಕಾರ್ಯತಃ ಶುದ್ಧ ನಿಷ್ಪ್ರಯೋಜಕ.
    3. (ಒಂದು ನಿರ್ದಿಷ್ಟ ಕೆಲಸದಲ್ಲಿ ಇತ್ತೀಚೆಗೆ ಪರಿಶ್ರಮ ಪಟ್ಟಿರುವುದರಿಂದ) ಕುಶಲ; ಕೌಶಲವಿರುವ.
  2. is good practice (ಅದೊಂದು) ಒಳ್ಳೆಯ ಅಭ್ಯಾಸ; ಆ ಅಭ್ಯಾಸ ಕುಶಲತೆಯನ್ನು ಹೆಚ್ಚಿಸುತ್ತದೆ.
  3. out of practice
    1. ಬಳಕೆ ತಪ್ಪಿ; ಅಭ್ಯಾಸ ತಪ್ಪಿ.
    2. ಅಭ್ಯಾಸ ತಪ್ಪಿಹೋಗಿ; ಸದ್ಯದಲ್ಲಿ ಅಭ್ಯಾಸ ಮಾಡದಿರುವುದರಿಂದ ಹಿಂದಿನ ಕೌಶಲ ಕಳೆದುಕೊಂಡು, ಕಾಣದಾಗಿ.
  4. put into practice ಕಾರ್ಯಗತಗೊಳಿಸು; ಕಾರ್ಯರೂಪಕ್ಕೆ ತರು; ಬಳಕೆಗೆ ತರು; ಜಾರಿಗೆ ತರು: put reforms into practice ಸುಧಾರಣೆಗಳನ್ನು ಜಾರಿಗೆ ತರು.