See also 2other  3other
1other ಅದರ್‍
ಗುಣವಾಚಕ
  1. ಬೇರೊಬ್ಬ ಯಾ ಬೇರೊಂದು; ಇನ್ನೊಂದು ಯಾ ಇನ್ನೊಬ್ಬ; ಮತ್ತೊಂದು ಯಾ ಮತ್ತೊಬ್ಬ; ಅನ್ಯ; ಇತರ; ಪರ; ಬೇರೆ; ಈಗಾಗಲೇ ಹೇಳಿದ್ದಲ್ಲದ ಯಾ ಸೂಚಿಸಿದ್ದಲ್ಲದ; ವ್ಯಕ್ತಿ ಯಾ ಜಾತಿಯಲ್ಲಿ ಭಿನ್ನವಾದ: other people ಬೇರೆಯವರು; ಇತರ ಜನ. other means ಬೇರೆ ಸಾಧನ; ಭಿನ್ನ ಮಾರ್ಗ. my reason is quite other ನನ್ನ ಕಾರಣ ತೀರ ಬೇರೆಯಾದುದು.
  2. ಅಧಿಕ; ಹೆಚ್ಚಿನ; ಬೇರೆ; ಮತ್ತೆ; ಜೊತೆಗೆ: we have other evidence ನಮ್ಮಲ್ಲಿ ಬೇರೆ (ಹೆಚ್ಚಿನ) ಸಾಕ್ಷ್ಯವಿದೆ. a few other examples ಮತ್ತೆ ಕೆಲವು ಉದಾಹರಣೆಗಳು.
  3. ಎರಡರಲ್ಲಿ ಒಂದು ಯಾ ಇಬ್ಬರಲ್ಲಿ ಒಬ್ಬ: open your other eye ನಿನ್ನ ಇನ್ನೊಂದು ಕಣ್ಣು ತೆರೆ.
  4. (the ಒಡನೆ) ಉಳಿದ; ಮಿಕ್ಕ; ಪ್ರಸಕ್ತವಾದುದನ್ನು ಬಿಟ್ಟು ಇತರ ಎಲ್ಲವನ್ನೂ ಪರಿಗಣಿಸಿದ, ನಿರಾಕರಿಸಿದ, ಮೊದಲಾದ ತರುವಾಯ ಉಳಿಯುವ: must be in the other pocket ಇನ್ನೊಂದು ಜೀಬಿನಲ್ಲಿರಬೇಕು. where are the other two? ಉಳಿದಿಬ್ಬರು ಯಾ ಮಿಕ್ಕಿಬ್ಬರು ಎಲ್ಲಿ?
  5. (than ಜೊತೆಗೆ) ವಿನಾ; ಬಿಟ್ಟು; ಹೊರತು; ಉಳಿದು: any person other than you ನಿನ್ನನ್ನು ಬಿಟ್ಟು ಯಾವನಾದರೂ.
ಪದಗುಚ್ಛ
  1. an other two
    1. ಬೇರೆ ಎರಡು.
    2. ಮತ್ತೆ ಎರಡು.
  2. every other day ದಿನಬಿಟ್ಟು ದಿನ; ಪ್ರತಿ ಮರುದಿನ: happens every other day ಪ್ರತಿ ಮರುದಿನ ಸಂಭವಿಸುತ್ತದೆ.
  3. no (or none) other than ಬೇರೆ ಯಾರೂ ಯಾ ಯಾವುದೂ ಅಲ್ಲ: it was none other than Ram ಅದು ಬೇರೆ ಯಾರೂ ಆಗಿರದೆ, ಸ್ವಯಂ ರಾಮನೇ ಆಗಿದ್ದ.
  4. on the other hand (ಹಿಂದಿನದಕ್ಕೆ ವಿರುದ್ಧವಾದ ಯಾ ವ್ಯತ್ಯಾಸವಾದ ಸಂಗತಿಯನ್ನು ಯಾ ವಾದವನ್ನು ಮುಂದಿಡುವಾಗ ಪ್ರಯೋಗ) ಸರಿಯಾಗಿ ನೋಡಿದರೆ; ಇನ್ನೊಂದು ಕಡೆಯಲ್ಲಿ; ಮತ್ತೊಂದು ಸಂದರ್ಭ ಯೋಚಿಸಿದರೆ.
  5. other things being equal ಮಿಕ್ಕ ವಿಷಯಗಳು ಸಮವಾಗಿದ್ದು ಯಾ ಸಮವಾಗಿದ್ದರೆ.
  6. somehow or other ಹೇಗೋ; ಹೇಗಾದರೂ; ಯಾವುದೇ ರೀತಿಯಲ್ಲಿ.
  7. some one or other ಯಾರಾದರೂ; ಯಾವನಾದರೂ ಒಬ್ಬ: some idiots or other have been shouting all night hoarse ಯಾರೋ ಅವಿವೇಕಿಗಳು ರಾತ್ರಿಯೆಲ್ಲಾ ಬೊಬ್ಬೆ ಹಾಕುತ್ತಿದ್ದರು.
  8. something or other ಯಾವುದಾದರೂ ಒಂದು.
  9. some time or other ಎಂದಾದರೂ, ಒಂದಲ್ಲ ಒಂದು ದಿನ.
  10. some way or other ಯಾವುದಾದರೂ, ಯಾವುದೋ ಒಂದು – ರೀತಿಯಲ್ಲಿ.
  11. the other thing (ಮುಖ್ಯವಾಗಿ ಹಾಸ್ಯ ಪ್ರಯೋಗ) (ಸ್ಪಷ್ಟವಾಗಿ ಅದನ್ನು ಹೇಳದಿರುವಾಗ) ಆ ಇನ್ನೊಂದು: if you don’t like it, do the other thing ನಿನಗೆ ಅದು ಹಿಡಿಸದಿದ್ದರೆ, ಆ ಇನ್ನೊಂದನ್ನು ಮಾಡು.
  12. the other day(or night or week etc.,) ಅಂದು; ಆವತ್ತು; ಕೆಲವು ದಿನಗಳ ಹಿಂದೆ; ಇತ್ತೀಚೆಗೆ; ಮೊನ್ನೆಮೊನ್ನೆ.
  13. the other two (ಅನಿರ್ದಿಷ್ಟವಾಗಿ ಹೇಳುವಾಗ ಪ್ರಯೋಗ) ಮಿಕ್ಕಿಬ್ಬರು; ಉಳಿದೆರಡು.
  14. the other woman ಆ ಇನ್ನೊಬ್ಬ ಹೆಂಗಸು; ವಿವಾಹಿತನ ಉಪಪತ್ನಿ, ನಲ್ಲೆ.
  15. the other world ಪರಲೋಕ.