See also 2odd
1odd ಆಡ್‍
ಗುಣವಾಚಕ
  1. ವಿಚಿತ್ರವಾದ; ವಿಲಕ್ಷಣವಾದ; ವಕ್ರವಾದ; ಅಚ್ಚರಿಯ; ಅಚ್ಚರಿ ಹುಟ್ಟಿಸುವಂಥ; ಅಸಾಮನ್ಯವಾದ; ಅಸಾಧಾರಣವಾದ; ಸಾಮಾನ್ಯ ರೀತಿ ಬಿಟ್ಟು ತನ್ನದೇ ಆದ ರೀತಿಯುಳ್ಳ: oddest creature I have ever seen ನಾನು ನೋಡಿರುವವರಲ್ಲೆಲ್ಲ ಅತ್ಯಂತ ವಿಚಿತ್ರ ಪ್ರಾಣಿ.
  2. ಅನಿಯತ; ನಿಯತವಲ್ಲದ; ಅನಿಶ್ಚಿತ; ಸಾಂದರ್ಭಿಕ ; ಗೊತ್ತುವಳಿಯಿಲ್ಲದ: picks up odd jobs ಯಾವುದೋ ಅನಿಯತ ಕೆಲಸಗಳನ್ನು ಸಂಪಾದಿಸಿಕೊಳ್ಳುತ್ತಾನೆ.
  3. ಸಾಮಾನ್ಯವಾಗಿ ಯಾರೂ ಗಮನಿಸದ ಯಾ ಪರಿಗಣಿಸದ: in some odd corner ಯಾರೂ ಗಮನಿಸದ ಒಂದು ಮೂಲೆಯಲ್ಲಿ. picks up odd bargains ಎಲ್ಲೋ ಮೂಲೆಯಲ್ಲಿರುವ ಅಗ್ಗದ ಸರಕನ್ನು ಕೊಳ್ಳುತ್ತಾನೆ.
  4. ಬಿಡುವಿನ; ಕೆಲಸವಿಲ್ಲದ: odd moments ಬಿಡುವಿನ, ಕ್ಷಣಗಳು, ಕಾಲ.
  5. ಊಹಿಸಲಾಗದ; ನೆಚ್ಚಿಕೆಯಿಲ್ಲದ; ಅನಿಶ್ಚಿತ.
  6. ಹೆಚ್ಚಿಗೆಯ; ಅಧಿಕ; ಲೆಕ್ಕಕ್ಕಿಂತ ಹೆಚ್ಚಿನ: swept up the odd bits left on the floor ನೆಲದ ಮೇಲೆ ಉಳಿದಿದ್ದ ಹೆಚ್ಚಿನ ಚೂರುಗಳನ್ನು ಗುಡಿಸಿ ಎತ್ತಿಕೊಂಡ. earned the odd rupee ಮಾಮೂಲಿಗಿಂತ ಹೆಚ್ಚಿನ ರೂಪಾಯಿಯನ್ನು ಗಳಿಸಿದ.
    1. (3, 5 ಮೊದಲಾದವುಗಳಂಥ ಸಂಖ್ಯೆಗಳ ವಿಷಯದಲ್ಲಿ) ಬೆಸ; ವಿಷಮ; ಮಿಗಿಲು; ಎರಡು ಸಮ ಸಂಖ್ಯೆಯ ಗುಂಪಾಗಿ ವಿಭಾಗಿಸಿದ ಮೇಲೆ ಉಳಿದ ಯಾ ಎರಡರಿಂದ ನಿಶ್ಶೇಷವಾಗಿ ಭಾಗವಾಗದ.
    2. (ಅನುಕ್ರಮವಾಗಿ ಎಣಿಕೆ ಮಾಡುವಂತೆ ಜೋಡಿಸಿರುವ ವಸ್ತುಗಳಲ್ಲಿ ಯಾ ವ್ಯಕ್ತಿಗಳಲ್ಲಿ) ಬೆಸ ಸಂಖ್ಯೆಯ; ವಿಷಮ ಅಂಕೆಯ: no parking on odd dates ಬೆಸಸಂಖ್ಯೆಯ ದಿನಗಳಲ್ಲಿ ವಾಹನಗಳ ನಿಲುಗಡೆ ಇಲ್ಲ.
  7. (ಇತರ ಎಲ್ಲವನ್ನೂ ವಿತರಣೆ ಮಾಡಿದ ನಂತರ ಇಲ್ಲವೆ ಜೋಡಿಗಳಾಗಿ ವಿಭಾಗಿಸಿದ ನಂತರದ) ಶೇಷ; ಉಳಿಕೆಯ; ಉಳಿದ: have got an odd sock ಒಂದು ಕಾಲುಚೀಲ ಉಳಿದಿದೆ.
  8. (ನಿಯತ ಕಾಲಿಕೆಗಳು, ಗ್ರಂಥಮಾಲೆ, ಮೊದಲಾದವುಗಳ ವಿಷಯದಲ್ಲಿ) ಬಿಡಿ; ಕ್ರಮವಿಲ್ಲದ; ಸಂಬಂಧವಿಲ್ಲದ; ಒಂದು ಶ್ರೇಣಿ ಯಾ ಒಂದು ವರ್ಗದಿಂದ ಬೇರೆಯಾಗಿರುವ: a few odd volumes ಕೆಲವು ಬಿಡಿ ಸಂಪುಟಗಳು. odd numbers (ಶ್ರೇಣಿಗೆ ಕ್ರಮ ಬದ್ಧವಾಗಿ ಸೇರದ) ಬಿಡಿ ಸಂಚಿಕೆಗಳು.
  9. (ಸಂಖ್ಯೆ, ಮೊತ್ತ, ತೂಕ, ಮೊದಲಾದವುಗಳ ಸೂಚ್ಯ ಪದಕ್ಕೆ ಸೇರಿಸಿದಾಗ) -ಕ್ಕಿಂತ ಸ್ವಲ್ಪ ಹೆಚ್ಚಿನ; ಅಧಿಕ ಚಿಲ್ಲರೆಯ: forty odd ನಲವತ್ತೂ ಚಿಲ್ಲರೆ; ನಲವತ್ತರ ಮೇಲೆ ಐವತ್ತರೊಳಗೆ. sixty thousand odd ಅರುವತ್ತು ಸಾವಿರ ಮತ್ತು ಕೆಲವು ನೂರುಗಳು, ಹತ್ತುಗಳು ಯಾ ಬಿಡಿಗಳು. sixty odd thousand ಅರುವತ್ತು ಚಿಲ್ಲರೆ ಸಾವಿರ; ಅರುವತ್ತು ಸಾವಿರದ ಮೇಲೆ ಎಪ್ಪತ್ತು ಸಾವಿರದ ಒಳಗೆ. forty-odd people ನಲವತ್ತು ಚಿಲ್ಲರೆ ಜನಗಳು; ನಲವತ್ತಕ್ಕಿಂತ ಹೆಚ್ಚು, ಐವತ್ತಕ್ಕಿಂತ ಕಡಮೆ ಜನ.
  10. ಹೆಚ್ಚಳ; ಉಳಿಕೆ; ಮೇಲಿನ ಚಿಲ್ಲರೆಯ; ಪೂರ್ಣ ಸಂಖ್ಯೆಗಿಂತ ಯಾ ಹೆಸರಿಸಿದ ಮೊಬಲಗಿಗಿಂತ ಎಷ್ಟು ಹೆಚ್ಚೋ ಅಷ್ಟರ: here is a ten-rupee note; pay the bill and keep the odd money ಇಗೋ ಈ ಹತ್ತು ರೂಪಾಯಿನ ನೋಟು ತೆಗೆದುಕೊ; ಬಿಲ್ಲನ್ನು ಪಾವತಿ ಮಾಡಿ ಉಳಿಕೆಯನ್ನು, ಹೆಚ್ಚಿನದನ್ನು, ಚಿಲ್ಲರೆಯನ್ನು ನೀನೇ ಇಟ್ಟುಕೊ. we have 102; what shall we do with the odd 2? ನಮ್ಮ ಹತ್ತಿರ 102 ಇದೆ. ಈ ಚಿಲ್ಲರೆ ಎರಡನ್ನು ಏನು ಮಾಡೋಣ?
ಪದಗುಚ್ಛ
  1. odd and even ಸರಿ ಬೆಸ ಯಾ ಸರಿಮಿಗಿಲು ಆಟ.
  2. the odd man ಬೆಸ ಸಂಖ್ಯೆಯ ಸದಸ್ಯರಿರುವ ಸಮಿತಿ ಮೊದಲಾದವುಗಳಲ್ಲಿ ನಿರ್ಣಾಯಕವಾದ ವೋಟು ಕೊಡುವವನು; ನಿರ್ಣಾಯಕ ಮತದಾರ.
  3. the odd man out
    1. ನಾಣ್ಯ ಮಿಡಿದು ಮೂವರಲ್ಲಿ ಒಬ್ಬನನ್ನು ಮಾತ್ರ ಆಯ್ದು ಕೊಳ್ಳುವ ವಿಧಾನ, ಉಪಾಯ.
    2. ವಿಲಕ್ಷಣ ವ್ಯಕ್ತಿ ಯಾ ವಸ್ತು; ಯಾವುದಾದರೊಂದು ವಿಷಯದಲ್ಲಿ ಒಂದು ತಂಡದಲ್ಲಿ ಇತರ ವ್ಯಕ್ತಿಗಳು ಯಾ ವಸ್ತುಗಳಿಗಿಂತ ಬೇರೆಯಾಗಿರುವ ವ್ಯಕ್ತಿ ಯಾ ವಸ್ತು.
  4. the odd trick (ವಿಸ್ಟ್‍ ಇಸ್ಪೀಟಾಟದಲ್ಲಿ ಎರಡು ಪಕ್ಷಗಳೂ ಆರಾರು ಪಟ್ಟುಗಳನ್ನು ಪಡೆದ ಮೇಲೆ ಉಳಿದ) ಹದಿಮೂರನೆಯ ಪಟ್ಟು.