See also 1muster
2muster ಮಸ್ಟರ್‍
ಸಕರ್ಮಕ ಕ್ರಿಯಾಪದ
  1. (ಮೊದಲಿಗೆ ತನಿಖೆ, ಗಣತಿ, ಮೊದಲಾದವುಗಳಿಗಾಗಿ ಸೈನಿಕರನ್ನು) ಒಟ್ಟುಗೂಡಿಸು; ಸೇರಿಸು; ಜಮಾಯಿಸು.
  2. ಶೇಖರಿಸು; ಕೂಡಿಸು; ಸೇರಿಸು; ಒಟ್ಟುಗೂಡಿಸು.
  3. (ಧ್ಯೆರ್ಯ, ಬಲ, ಮೊದಲಾದವನ್ನು) ತಂದುಕೊ; ಕೂಡಿಸಿಕೊ.
  4. (ಆಸ್ಟ್ರೇಲಿಯ) (ದನಕರುಗಳನ್ನು, ಜಾನುವಾರುಗಳನ್ನು) ಮಂದೆಗೂಡಿಸು; ಜಮಾಯಿಸು; ಒಟ್ಟುಗೂಡಿಸು; ಸೇರಿಸು.
ಅಕರ್ಮಕ ಕ್ರಿಯಾಪದ

ಶೇಖರವಾಗು; ಸಮೂಹವಾಗು; ಸೇರು; ಒಟ್ಟುಗೂಡು.

ಪದಗುಚ್ಛ
  1. muster in (ಅಮೆರಿಕನ್‍ ಪ್ರಯೋಗ) (ಸೈನ್ಯಕ್ಕೆ) ಹೊಸ ಸಿಪಾಯಿಗಳನ್ನು ಸೇರಿಸಿಕೊ.
  2. muster out (ಅಮೆರಿಕನ್‍ ಪ್ರಯೋಗ) (ಸಿಪಾಯಿಗಳು ಮೊದಲಾದವರನ್ನು) ತೆಗೆದು ಹಾಕು; ವಜಾಮಾಡು.
  3. muster up (ಧೈರ್ಯ, ಶಕ್ತಿ, ಮೊದಲಾದವನ್ನು) ತಂದುಕೊ; ಕೂಡಿಸಿಕೊ.