(ಪ್ರಾಚೀನ ಪ್ರಯೋಗ ಏಕವಚನ may, ಭೂತರೂಪ might). ಸಂಭವ, ಸಾಧ್ಯತೆ, ಅನುಜ್ಞೆ, ಸಂದೇಹ, ಕೋರಿಕೆ, ಮೊದಲಾದವನ್ನು ಸೂಚಿಸುವಲ್ಲಿ ಪ್ರಯೋಗ.
- (ಸಂಭವ ಸೂಚಿಸುವಾಗ): it may be true ಅದು ನಿಜವಿದ್ದೀತು; ಅದು ನಿಜವಿರಬಹುದು (ಆದರೆ ಹಾಗಿರಲು ಸಾಧ್ಯವಿಲ್ಲ). it may not be ಅದು ಹಾಗಿರಲಾರದು (ಪ್ರಾಯಶಃ ಹಾಗಿಲ್ಲ).
- (ಅನುಜ್ಞೆ ಸೂಚಿಸುವಲ್ಲಿ): you may go ನೀನು ಹೋಗಬಹುದು. you may call at the bank ನೀನು ಬ್ಯಾಂಕಿನ ಬಳಿ ಹೋಗು (ಎಂದು ನನ್ನ ಸೂಚನೆ). you might have offered help ನೀನು ಸಹಾಯ ಮಾಡಬಹುದಾಗಿತ್ತು (ಆದರೆ ಮಾಡಲಿಲ್ಲ).
- (ಆಶಯ ಮೊದಲಾದವನ್ನು ಸೂಚಿಸುವಲ್ಲಿ): I hope he may succeed ಅವನು ಜಯಿಸಲೆಂದು ಯಾ ಅವನಿಗೆ ಜಯವಾಗಲೆಂದು ಆಶಿಸುತ್ತೇನೆ, ನಂಬುತ್ತೇನೆ. may you live to repent it ನೀನು ಅದಕ್ಕಾಗಿ ಪಶ್ಚಾತ್ತಾಪಡುವಂತಾಗಲಿ.
- (ಸಂದೇಹ, ವ್ಯಂಗ್ಯ, ಅನಿಶ್ಚಯ, ಮೊದಲಾದವನ್ನು ಸೂಚಿಸುವ ಪ್ರಶ್ನಾರ್ಥಕ ವಾಕ್ಯಗಳಲ್ಲಿ); who may you be? ನೀನು ಯಾರಾಗಿರಬಹುದು?