See also 1locomotive
2locomotive ಲೋಕಮೋಟಿವ್‍
ಗುಣವಾಚಕ
  1. ಚಲನ; ಕ್ರಮಣ; ಚಲನದ ಯಾ ಚಲನಕ್ಕೆ ಸಂಬಂಧಿಸಿದ ಯಾ ಚಲನದ ಮೇಲೆ ಪ್ರಭಾವ ಬೀರುವ: locomotive power ಚಲನಬಲ.
  2. ಚಲನಶೀಲ; ಸದಾಚಲಿ; ಒಂದೇ ಎಡೆಯಲ್ಲಿ ನಿಲ್ಲದ: the locomotive bivalves ಚಲಿಸುವ ಯಾ ಚಲನಶೀಲ ಇಚ್ಚಿಪ್ಪು ಜೀವಿಗಳು. a locomotive person (ಹಾಸ್ಯ ಪ್ರಯೋಗ) ನಿತ್ಯಯಾತ್ರಿಕ; ಸದಾಸಂಚಾರಿ; ಸದಾ ಚಲಿಸುತ್ತಲೇ ಇರುವವನು.
  3. (ಸ್ಥಳದಿಂದ ಸ್ಥಳಕ್ಕೆ) ಚಲಿಸುವ; ಕ್ರಮಿಸುವ: locomotive faculty ಸ್ಥಳದಿಂದ ಸ್ಥಳಕ್ಕೆ ಚಲಿಸುವ ಸಾಮರ್ಥ್ಯ; ಕ್ರಮಣ – ಸಾಮರ್ಥ್ಯ, ಶಕ್ತಿ.
  4. (ಹಾಸ್ಯ ಪ್ರಯೋಗ) ಪ್ರಯಾಣ(ದ); ಸಂಚಾರ(ದ): in these locomotive days ಪ್ರಯಾಣವೇ ಒಂದು ರೂಢಿಯಾಗಿರುವ ಈ ಕಾಲದಲ್ಲಿ; ಈ ಸಂಚಾರ ಯುಗದಲ್ಲಿ.
  5. ಚಲನಶಕ್ತಿಯ; ಚಲನಸಾಮರ್ಥ್ಯವುಳ್ಳ.
  6. ಚಲನಕಾರಕ; ಸ್ಥಳದಿಂದ ಸ್ಥಳಕ್ಕೆ ಚಲನವನ್ನುಂಟುಮಾಡುವ: the locomotive organs ಚಲನಕಾರಕ ಅವಯವಗಳು, ಅಂಗಗಳು.