1likely
ಲೈಕ್ಲಿ
ಗುಣವಾಚಕ
( ತರರೂಪ more likely, likelier; ತಮರೂಪ most likely, likeliest).
- ಆಗಬಹುದಾದ; ಆಗುವಂತೆ ತೋರುವ; ಸಂಭಾವ್ಯ; ಸಂಭವನೀಯ; ಇರಬಹುದಾದ; ನಿಜವೆನಿಸಬಹುದಾದ; ನಿಜವಿರಬಹುದಾದ: it is not like that they will come ಅವರು ಬರುತ್ತಾರೆ ಎನ್ನುವುದು ಸಂಭವನೀಯವಲ್ಲ; ಅವರು ಬರುವ ಸಂಭವ ಇಲ್ಲ. the most likely place is Mysore ಸಂಭವನೀಯ ಸ್ಥಳವೆಂದರೆ ಮೈಸೂರು. a likely story ನಿಜವಿರಬಹುದಾದ ಕತೆ; ಸಂಭವನೀಯ ಕಥೆ.
- ನಿರೀಕ್ಷೆಯ; ನಿರೀಕ್ಷಣೀಯ; ನಿರೀಕ್ಷಿಸಬಹುದಾದ; ನಿರೀಕ್ಷೆಯಿರುವ: he is not likely to come now ಅವನು ಈಗ ಬರುವ ನಿರೀಕ್ಷೆ ಇಲ್ಲ.
- ಸಂಭಾವ್ಯವಾದ; ಸಂಭವನೀಯವಾದ; ಭರವಸೆಯ; ಆಗಬಹುದೆಂದು, ಇರಬಹುದೆಂದು, ಮಾಡಬಹುದೆಂದು ಯಾ ಯಾವುದೇ ಉದ್ದೇಶಕ್ಕೆ ಅನುಕೂಲವಾದುದೆಂದು, ತಕ್ಕುದಾದುದೆಂದು, ಸೂಕ್ತವಾದುದೆಂದು, ಸಮರ್ಥವಾದುದೆಂದು, ಯುಕ್ತವಾದುದೆಂದು – ತೋರುವ; ಭರವಸೆಯಿಂದ ಕೂಡಿದ: called at every likely house ಭರವಸೆ ಕಂಡ ಪ್ರತಿ ಮನೆಯಲ್ಲೂ ವಿಚಾರಿಸಿದ. this is a likely spot ಇದು ಸೂಕ್ತವಾದ ಸ್ಥಳ. three likely lads ಮೂವರೂ ಸೂಕ್ತವಾದ ಹುಡುಗರು.
ಪದಗುಚ್ಛ
- as likely as not ಬಹುಶಃ; ಪ್ರಾಯಃ.
- not likely! (ಆಡುಮಾತು) ಖಂಡಿತ ಇಲ್ಲ; ಸಾಧ್ಯವಿಲ್ಲ.