See also 2lacquer
1lacquer ಲ್ಯಾಕರ್‍
ನಾಮವಾಚಕ

ಲ್ಯಾಕರ್‍:

  1. ವಾರ್ನೀಸು; ಮೆರುಗು; (ಮದ್ಯಸಾರದಲ್ಲಿ ಅರಗನ್ನು ಕರಗಿಸಿ ಮಾಡಿದ ಯಾ ಸಂಶ್ಲೇಷಿತ ಪದಾರ್ಥಗಳಿಂದ ಮಾಡಿದ. ಹಿತ್ತಾಳೆ, ಮರ, ಮೊದಲಾದವುಗಳನ್ನು ರಕ್ಷಿಸಲು ಅವಕ್ಕೆ ಬಳಿಯುವ) ಒಂದು ಬಗೆಯ ಬಣ್ಣದ ದ್ರವ.
  2. ತಲೆಗೂದಲನ್ನು ಒಂದು ಶೈಲಿಯಲ್ಲಿಡಲು ಅದಕ್ಕೆ ತುಂತುರಿಸುವ ಒಂದು ರಾಸಾಯನಿಕ ವಸ್ತು.
  3. ಲ್ಯಾಕರ್‍ ಮರದ ಜೀವರಸ.
  4. ಮೆರುಗೆಣ್ಣೆ; ಸಾಮಾನುಗಳಿಗೆ ಮೆರುಗು ಕೊಡಲು ಬಳಸುವ, ಜಪಾನಿನ ಒಂದು ಬಗೆಯ ಮರದಿಂದ ದೊರಕುವ ರಾಳ.
  5. ಮೆರುಗು ಸಾಮಾನು; ಮೆರುಗೆಣ್ಣೆ ಬಳಿದ ಸಾಮಾನು.