See also 1just
2just ಜಸ್ಟ್‍
ಕ್ರಿಯಾವಿಶೇಷಣ
  1. ಸರಿಯಾಗಿ; ನಿಷ್ಕೃಷ್ಟವಾಗಿ; ಕರಾರುವಾಕ್ಕಾಗಿ: just at that spot ಸರಿಯಾಗಿ ಆ ಸ್ಥಳದಲ್ಲೇ; ಅದೇ ಸ್ಥಳದಲ್ಲೇ. just then ಆ ಹೊತ್ತಿಗೆ ಸರಿಯಾಗಿ. just three O’clock ಈಗ ಸರಿಯಾಗಿ ಮೂರು ಗಂಟೆ; ಈಗ ತಾನೇ, ಇದೀಗ, ಇನ್ನೂ – ಮೂರು ಗಂಟೆ ಅಷ್ಟೇ. just as I opened the door ನಾನು ಬಾಗಿಲು ತೆಗೆಯುವುದಕ್ಕೆ ಸರಿಯಾಗಿ; ನಾನು ಬಾಗಿಲು ತೆಗೆಯುತ್ತಿದ್ದಂತೆ. just what I want ನಾನು ಬಯಸಿದ್ದೇ; ನಾನೇನು ಬಯಸುತ್ತೇನೆಯೋ ಅದೇ.
  2. ಹಾಗೆಯೇ; ಅಂತೆಯೇ; ಸರಿಯಾಗಿ: just as you say ನೀನು ಹೇಳಿದಂತೆಯೇ.
  3. ಅದೇ; ಅದೇನೇ; ಅದೇಯೇ: that is just it ಹೌದು ಅದೇ; ವಿವಾದದಲ್ಲಿರುವ ಅಂಶ ಅದೇನೆ.
  4. (ನಿಖರವಾದ ಸಮಾಚಾರವನ್ನು ಕೇಳುವ ಪ್ರಶ್ನಾರ್ಥಕ ಪದಗಳ ಜೊತೆಯಲ್ಲಿ) just how did you do it? ಅದನ್ನು ಹೇಗೆತಾನೇ ಮಾಡಿದೆ? I wonder just how good he is ಅವನು ಎಷ್ಟರಮಟ್ಟಿಗೆ ಒಳ್ಳೆಯವನೆಂದು ಅಥವಾ ಸಮರ್ಥನೆಂದು ನಾನು ಕೌತುಕಪಡುತ್ತೇನೆ.
  5. ಕೇವಲ ಅಷ್ಟು ಮಾತ್ರ; ತಾವನ್ಮಾತ್ರ; ಎಷ್ಟು ಬೇಕೋ, ಅವಶ್ಯಕವೋ ಅಷ್ಟೇ: I just managed it ಅಷ್ಟು ಮಾತ್ರದಲ್ಲೇ, ಅಷರಲ್ಲೇ ಹೇಗೋ ಅದನ್ನು ನಿಭಾಯಿಸಿದೆ. I just saw him (ಬ್ರಿಟಿಷ್‍ ಪ್ರಯೋಗ) ಅವನನ್ನು ಕೇವಲ ನೋಡಿದೆ ಅಷ್ಟೇ. (wait) just a minute, please ದಯವಿಟ್ಟು ಒಂದೇ ಒಂದು ನಿಮಿಷ, ಒಂದು ನಿಮಿಷಮಾತ್ರ ತಡೆಯಿರಿ.
  6. ಇದೀಗ; ಈಗ ತಾನೇ; ಈಗ ಸ್ವಲ್ಪ ಹೊತ್ತಿನಲ್ಲಿ; ಆ ಸಮಯಕ್ಕೆ ಸರಿಯಾಗಿ ಅಥವಾ ಸ್ವಲ್ಪ ಹೆಚ್ಚು ಕಡಿಮೆ ಆ ಹೊತ್ತಿಗೆ: I have just seen him (ಬ್ರಿಟಿಷ್‍ ಪ್ರಯೋಗ) ಅವನನ್ನು ಈಗ ತಾನೇ ನೋಡಿದೆ.
  7. (ಆಡುಮಾತು) ಕೇವಲ; ಇಷ್ಟೇ; ಅಷ್ಟೇ: it’s just that I don’t like him ನನಗೆ ಅವನ ವಿಷಯದಲ್ಲಿ ಒಲವಿಲ್ಲ, ಅಷ್ಟೆ; ನನಗೆ ಅವನನ್ನು ಕಂಡರೆ ಆಗುವುದಿಲ್ಲ, ಅಷ್ಟೆ. we are just good friends ನಾವು ಒಳ್ಳೆಯ ಸ್ನೇಹಿತರು ಅಷ್ಟೆ. it just doesn’t make sense ಅದರಲ್ಲೇನೂ, ಅದಕ್ಕೇನೂ – ಅರ್ಥವಿಲ್ಲ, ಅಷ್ಟೆ. just listen to that cheering! ಆ ಜಯಕಾರವನ್ನು ಸ್ವಲ್ಪ ಕೇಳು, ಆಲಿಸು!
  8. ಒಂದಿಷ್ಟು; ಸ್ವಲ್ಪ: just (you) wait till I catch you ನಾನು ನಿನ್ನನ್ನು ಹಿಡಿಯುವವರೆಗೂ, ನನಗೆ ನೀನು ಸಿಕ್ಕುವವರೆಗೂ – ಒಂದಿಷ್ಟು ತಡೆ, ಸ್ವಲ್ಪ ತಾಳು.
  9. (ಆಡುಮಾತು) ನಿಜಕ್ಕೂ; ಖಂಡಿತ(ವಾಗಿಯೂ); ನಿಜವಾಗಿಯೂ: it is just splendid ಅದು ನಿಜಕ್ಕೂ ಅದ್ಭುತವಾಗಿದೆ.
  10. ಸಂಪೂರ್ಣವಾಗಿ; ಪೂರ್ತಿಯಾಗಿ; ಸರ್ವಥಾ: not just yet ಇನ್ನೂ (ಪೂರ್ತಿ) ಇಲ್ಲ; ಈಗಲೇ ಇನ್ನೂ ಇಲ್ಲ ಅಥವಾ ಅಲ್ಲ; ಇನ್ನೂ ಆಗಿಲ್ಲ. it is just as well that I checked ಈಗಲೇ ನಾನು (ಅದನ್ನು) ಪರೀಕ್ಷಿಸಿದರೆ ಒಳ್ಳೆಯದು.
  11. (ಅಶಿಷ್ಟ) (ಅವಧಾರಣಾರ್ಥದಲ್ಲಿ) ಸರಿಯಾಗಿ; ನಿಜವಾಗಿ; ಸತ್ಯವಾಗಿ; ಖಚಿತವಾಗಿ; ನಿಶ್ಚಿತವಾಗಿ: won’t I just give him a pasting! ನಾನವನಿಗೆ ಸರಿಯಾಗಿ ಕೊಡ್ತೀನೋ ಇಲ್ಲವೋ ನೋಡುತ್ತಿರು.
ಪದಗುಚ್ಛ
  1. just about (ಆಡುಮಾತು)
    1. ಸ್ವಲ್ಪ ಹೆಚ್ಚು ಕಡಿಮೆ; ಸರಿಸುಮಾರು.
    2. ಸ್ವಲ್ಪ – ಸರಿಯಾಗಿ, ಕರಾರುವಾಕ್ಕಾಗಿ.
    3. ಹೆಚ್ಚು ಕಡಮೆ – ಪೂರ್ತಿಯಾಗಿ, ಸಂಪೂರ್ಣವಾಗಿ.
  2. just in case (ಮುನ್ನೆಚ್ಚರಿಕೆಗಾಗಿ) ಒಂದು ವೇಳೆ ಹಾಗಾದಲ್ಲಿ; ಒಂದು ವೇಳೆ ಹಾಗೆ – ಆದರೆ, ನಡೆದರೆ, ಸಂಭವಿಸಿದರೆ.
  3. just now
    1. ಈಗಲೇ; ಈ ಕ್ಷಣವೇ; ಈ ಕ್ಷಣದಲ್ಲಿ.
    2. ಇದೀಗ; ಈಗ ತಾನೇ; ಕ್ಷಣ (ಕಾಲ) ಮುಂಚೆ.
  4. just so
    1. ಅಂತೆಯೇ; ಹಾಗೆಯೇ.
    2. ಏರ್ಪಡಿಸಿರುವಂತೆಯೇ: she likes it just so ಈಗ ಏರ್ಪಡಿಸಿರುವುದೇ ಅವಳಿಗೆ ಇಷ್ಟ.
    3. ನೀನು ಹೇಳಿದಂತೆಯೇ, ಹೇಳಿದಕ್ಕೆ ಸರಿಯಾಗಿ.