See also 2instrument
1instrument ಇನ್‍ಸ್ಟ್ರಮಂಟ್‍
ನಾಮವಾಚಕ
  1. ಸಾಧನ; ಉಪಕರಣ; ಹತ್ಯಾರ; ಸಲಕರಣೆ.
  2. ಸಾಧನ; ಒಬ್ಬನ ಯಾ ಒಂದು ಕೆಲಸದಲ್ಲಿ ಸಾಧನವಾದವನು.
  3. (ಮುಖ್ಯವಾಗಿ ಸೂಕ್ಷ್ಮ ಯಾ ವೈಜ್ಞಾನಿಕ ಕಾರ್ಯಕ್ಕಾಗಿ ಬಳಸುವ) ಸಲಕರಣೆ; ಹತ್ಯಾರ; ಸಾಧನ.
  4. ಸಾಧನ; ಒಂದು ಕೆಲಸ ಮಾಡುವಲ್ಲಿ ಬಳಸುವ ವಸ್ತು: the meeting was an instrument in his success ಸಭೆಯು ಅವನ ಯಶಸ್ಸಿಗೆ ಸಾಧನವಾಯಿತು.
  5. (ತಂತಿ ಮೊದಲಾದವುಗಳ ಕಂಪನದಿಂದ ಯಾ ಕೊಳವಿ ಮೊದಲಾದವುಗಳಲ್ಲಿಯ ಗಾಳಿಯ ಕಂಪನದಿಂದ ಸಂಗೀತ ಸ್ವರಗಳು ಹುಟ್ಟುವಂತೆ ರಚಿಸಿದ) ವಾದ್ಯ: musical instrument ಸಂಗೀತ ವಾದ್ಯ.
  6. (ವಿಧಿಬದ್ಧವಾದ, ಮುಖ್ಯವಾಗಿ ನ್ಯಾಯವಿಧಿಗನುಸಾರವಾದ) ಪತ್ರ; ದಸ್ತೈವಜು.
  7. ಸ್ಥಾನ ನಿರ್ದೇಶಕ; ಮುಖ್ಯವಾಗಿ ವಿಮಾನದಲ್ಲಿ, ಕತ್ತಲೆ ಮೊದಲಾದವುಗಳಲ್ಲಿ ಅದರ ಸ್ಥಾನವನ್ನು ನಿರ್ಣಯಿಸಲು ಬಳಸುವ ಸಾಧನ.
ಪದಗುಚ್ಛ

stringed instruments ತಂತಿ ವಾದ್ಯಗಳು.