See also 2hopper
1hopper ಹಾಪರ್‍
ನಾಮವಾಚಕ
  1. ಒಂಟಿಕಾಲಿನಲ್ಲಿ ನೆಗೆಯುವ, ಜಿಗಿಯುವ, ಕುಪ್ಪಳಿಸುವ – ವ್ಯಕ್ತಿ.
  2. (ಮುಖ್ಯವಾಗಿ ಚಿಗಟ, ಮಡಕೆ, ಮೊದಲಾದ) ಜಿಗಿಹುಳು; ನೆಗೆಯುವ, ಕುಪ್ಪಳಿಸುವ – ಕೀಟ.
  3. ಗಿರಣಿ ಬಾಯಿ; ಲಾಳಿಕೆ ತೊಟ್ಟಿ; ಬೀಸುವ ಗಿರಣಿಗೆ ಧಾನ್ಯವನ್ನು ಒದಗಿಸುವ ತಲೆಕೆಳಗಾದ ಆಲಿಕೆಯ ಆಕಾರದ ತೊಟ್ಟಿ.
  4. (ಬೇರಾವುದೇ ಯಂತ್ರದ) ಲಾಳಿಕೆ ತೊಟ್ಟಿ(ಯಂಥ ಭಾಗ).
  5. (ಹೂಳೆತ್ತುವ ಯಂತ್ರದಿಂದ ಕೆಸರು ಮೊದಲಾದವನ್ನು ಕೊಂಡೊಯ್ದು ಹೊರಕ್ಕೆ ಹಾಕುವ ಚಪ್ಪಟೆ) ದೋಣಿ.
  6. ತಳ ಗಟ್ಟಿನಲ್ಲಿನ ತೆರಪಿನಿಂದ ಕಲ್ಲಿದ್ದಲು ಮೊದಲಾದವನ್ನು ಹೊರಕ್ಕೆ ಬಿಡುವ, ಚೆಲ್ಲುವ ರೈಲು ಬೋಗಿ, ಡಬ್ಬಿ.