See also 1handle
2handle ಹ್ಯಾಂಡ್‍ಲ್‍
ಸಕರ್ಮಕ ಕ್ರಿಯಾಪದ
  1. ಕೈಯಿಂದ ಮುಟ್ಟು; ಮುಟ್ಟಿ ನೋಡು; ಕೈಯಾಡಿಸು; ಹಸ್ತದಿಂದ ಸ್ಪರ್ಶಮಾಡು.
  2. (ಕೈಯಿಂದ ಹಿಡಿದು) ನಡೆಸು; ಮಾಡು; ಬಳಸು; ಹಿಡಿದಾಡು: handle a gun with precision ನಿಷ್ಕೃಷ್ಟವಾಗಿ ಬಂದೂಕನ್ನು ಹಿಡಿ, ಬಳಸು.
  3. (ಒಬ್ಬನನ್ನು, ಒಂದನ್ನು) ನೋಡಿಕೊ; ನಿರ್ವಹಿಸು; ನಿಭಾಯಿಸು; ಹಿಡಿತದಲ್ಲಿಟ್ಟುಕೊ: she handles the household accounts ಅವಳು ಮನೆಯ (ಖರ್ಚುವೆಚ್ಚದ) ಲೆಕ್ಕಾಚಾರವನ್ನು ನೋಡಿಕೊಳ್ಳುತ್ತಾಳೆ, ನಿರ್ವಹಿಸುತ್ತಾಳೆ. handle an animal ಮೃಗವನ್ನು (ಹಿಡಿದು) ನಡೆಸು, ಹಿಡಿತದಲ್ಲಿಡು.
  4. (ಒಬ್ಬನನ್ನು ಯಾವುದೋ ಒಂದು ರೀತಿಯಲ್ಲಿ) ನಡೆಸಿಕೊ; (ಒಬ್ಬನ ವಿಷಯದಲ್ಲಿ) ವರ್ತಿಸು: handle a person roughly ಒಬ್ಬನೊಡನೆ ಒರಟಾಗಿ ವರ್ತಿಸು. handle a person kindly ಒಬ್ಬನೊಡನೆ ಮೃದುವಾಗಿ ನಡೆದುಕೊ.
  5. (ವಿಷಯವನ್ನು) ಪ್ರತಿಪಾದಿಸು; ನಿರೂಪಿಸು; ನಿರ್ವಹಿಸು; ಚರ್ಚಿಸು; ಪ್ರಸ್ತಾಪಿಸು.
  6. (ಸಾಮಾನುಗಳ) ವ್ಯಾಪಾರ – ಮಾಡು, ನಡೆಸು: he handles dry goods ಅವನು ಧಾನ್ಯಗಳ ವ್ಯಾಪಾರ ನಡೆಸುತ್ತಾನೆ.