See also 2halter
1halter ಹಾಲ್ಟರ್‍
ನಾಮವಾಚಕ
  1. (ಕುದುರೆಗಳನ್ನು ಯಾ ದನಗಳನ್ನು ಕಟ್ಟಿ ಹಾಕಲು ಬಳಸುವ) ಕುಣಿಕೆಯುಳ್ಳ ಹಗ್ಗ; ತಲೆತೊಡಿಗೆಯುಳ್ಳ ಬಾರು ಪಟ್ಟಿ; ತಲೆಕುಣಿಕೆ. Figure: halter-1
  2. (ಮನುಷ್ಯನನ್ನು ಗಲ್ಲಿಗೇರಿಸುವ) ಉರುಳು ಹಗ್ಗ; ಗಲ್ಲುಹಗ್ಗ; ನೇಣು.
  3. ಗಲ್ಲುಸಾವು; ನೇಣುಸಾವು.
  4. ಹೆಗಲುಗಳನ್ನು ಬರಿದಾಗಿರುವಂತೆ ಬಿಟ್ಟು ಕುತ್ತಿಗೆಯ ಹಿಂಭಾಗದಲ್ಲಿನ ಪಟ್ಟಿಯಿಂದ ಎತ್ತಿ ಹಿಡಿದಿರುವ ಹೆಂಗಸಿನ ಉಡುಪಿನ ಮೇಲ್ಭಾಗ ಯಾ ಉಡುಪನ್ನು ಹಾಗೆ ಎತ್ತಿ ಹಿಡಿದಿರುವ ಹಿಂಕತ್ತುಪಟ್ಟಿ.