See also 2grade
1grade ಗ್ರೇಡ್‍
ನಾಮವಾಚಕ
  1. (ಸ್ಥಾನ, ಪ್ರವೀಣತೆ, ಗುಣ, ಬೆಲೆ, ಮೊದಲಾದವುಗಳಲ್ಲಿ) ದರ್ಜೆ; ಅಂತಸ್ತು; ಮಜಲು; ಮಟ್ಟ; ಶ್ರೇಣಿ; ಸ್ತರ.
  2. (ಸ್ಥಾನ, ಪ್ರವೀಣತೆ, ಮೊದಲಾದವುಗಳಲ್ಲಿ ಸಮಾನವಾಗಿರುವ ವ್ಯಕ್ತಿಗಳ ಯಾ ವಸ್ತುಗಳ) ವರ್ಗ: teachers of every grade ಪ್ರತಿಯೊಂದು ವರ್ಗದ ಅಧ್ಯಾಪಕರು.
  3. (ಶಾಲೆಯಲ್ಲಿ) ತರಗತಿ; ವರ್ಗ; ಇಯತ್ತೆ.
  4. (ದನದ ತಳಿಯಿಳಿಸುವುದರಲ್ಲಿ ನಾಡುಹಸುಗಳ ಮೇಲೆ ಉತ್ತಮ ತಳಿಯ ಗೂಳಿಗಳನ್ನು ಹಾರಿಸಿ ಪಡೆದ) ತಳಿಭೇದ; ಅಡ್ಡತಳಿಯ ಫಲ.
  5. (ಪ್ರಾಣಿವಿಜ್ಞಾನ) ಮಟ್ಟ; ವಿಕಸನದ ಹಾದಿಯಲ್ಲಿ ಹೆಚ್ಚು ಕಡಿಮೆ ಅದೇ ಹಂತದಲ್ಲಿ ಕವಲೊಡೆದು ಬಂದ ಪ್ರಾಣಿ ಸಮೂಹ.
  6. (ಭಾಷಾಶಾಸ್ತ್ರ) ಸ್ವರವ್ಯತ್ಯಯ (ಶ್ರೇಣಿಯಲ್ಲಿ ಸಂಬಂಧಾರ್ಥಕ) ಸ್ಥಾನ; ನಿರ್ದಿಷ್ಟ ಸ್ವರ ಯಾ ಪದದ ಮೂಲರೂಪವು ಸ್ವರ ವ್ಯತ್ಯಯ ಶ್ರೇಣಿಯಲ್ಲಿ ಪಡೆದಿರುವ ಸ್ಥಾನ.
  7. ಓರಡಿ; ಉತಾರು; ಇಳುಕಲು; ಇಳಿಜಾರು.
  8. ಓರಡಿ ಮಾನ; ಪ್ರವಣತೆ; ಏರಿಕೆಯ ಯಾ ಇಳಿತದ ಪ್ರಮಾಣ; ಓರಡಿಯ ಪ್ರಮಾಣ; ಗತಿಮಾನ.
  9. ಗುಣಾಂಕ; ವರ್ಗಾಂಕ; ಶಾಲೆಯ ಅಧ್ಯಯನ, ಪರೀಕ್ಷೆ, ಮೊದಲಾದವುಗಳಲ್ಲಿ ವಿದ್ಯಾರ್ಥಿಯ ಸಾಧನೆಯ ಮಟ್ಟವನ್ನು ಸೂಚಿಸುವ ಅಂಕ, ನಂಬರು, ಅಕ್ಷರ, ಪದ, ಮೊದಲಾದವು ಉದಾಹರಣೆಗೆ 80%. “A”, “Excellent”, “Fair”.
ಪದಗುಚ್ಛ
  1. at grade (ಅಮೆರಿಕನ್‍ ಪ್ರಯೋಗ) ಒಂದೇ ಮಟ್ಟದಲ್ಲಿ; ಸಮಮಟ್ಟದಲ್ಲಿ: a railroad crosses a highway at grade ಒಂದು ರೈಲು ದಾರಿಯು ಹೆದ್ದಾರಿಯನ್ನು ಒಂದೇ ಮಟ್ಟದಲ್ಲಿ ಅಡ್ಡ ಹಾಯುತ್ತದೆ.
  2. on the down grade ಇಳಿಯುತ್ತ; ಬೀಳುತ್ತ; ಇಳಿಮುಖದಲ್ಲಿ (ರೂಪಕವಾಗಿಸಹ).
  3. on the up grade ಏರುತ್ತ; ಏರುಮುಖದಲ್ಲಿ (ರೂಪಕವಾಗಿಸಹ): business is on the up grade ವ್ಯಾಪಾರ ಅಭಿವೃದ್ಧಿಯಾಗುತ್ತಿದೆ.
  4. over grade (ಒಂದು ಹೆದ್ದಾರಿ, ರೈಲುಮಾರ್ಗ, ಯಾ ಪಾದಚಾರಿ ಮಾರ್ಗ ಇನ್ನೊಂದನ್ನು ಅಡ್ಡಾಹಾಯುವಾಗ) ಮೇಲಿನ ಮಟ್ಟದಲ್ಲಿ.
  5. under grade (ಎರಡು ಮಾರ್ಗಗಳು ಅಡ್ಡಹಾಯುವಾಗ) ಕೆಳಗಿನ ಮಟ್ಟದಲ್ಲಿ.
  6. up to grade ಅಪೇಕ್ಷಿಸಿದ ಯಾ ಬೇಕಾದ ಗುಣಮಟ್ಟದ: this shipment is not up to grade ಈ ಹಡಗಿನ ಸರಕು ಅಪೇಕ್ಷಿಸಿದ ಗುಣಮಟ್ಟದ್ದಲ್ಲ.
ನುಡಿಗಟ್ಟು

make the grade

  1. ತೇರ್ಗಡೆಯಾಗು; ಯಶಸ್ವಿಯಾಗು; ಜಯ ಹೊಂದು; ಅಪೇಕ್ಷಿತ ಯಾ ನಿರ್ದಿಷ್ಟ ಗುರಿಮುಟ್ಟು: his son could not make the grade in school ಅವನ ಮಗ ಶಾಲೆಯಲ್ಲಿ ತೇರ್ಗಡೆಯಾಗಲಿಲ್ಲ.
  2. ಒಳ್ಳೆಯ ಮಟ್ಟ ಸಾಧಿಸು, ಮುಟ್ಟು.