See also 2gown
1gown ಗೌನ್‍
ನಾಮವಾಚಕ
  1. ಗೌನು; ಮೇಲಂಗಿ; ನಿಲುವಂಗಿ; ದೊಗಲೆ; ಸಡಿಲವಾದ ಉದ್ದನೆಯ ಮೇಲುಡುಪು (ಮುಖ್ಯವಾಗಿ ಹೆಂಗಸಿನ, ಸಾಮಾನ್ಯವಾಗಿ ಅಂದಚಂದಗಳ ತೋರ್ಕೆಯ ಉಡಿಗೆ).
  2. ಪುರಾತನ ರೋಮನರ ಟೋಗ, ಉತ್ತರೀಯ, ಮೇಲರಿವೆ.
  3. (ಆಲ್ಡರ್‍ಮನ್‍, ನ್ಯಾಯಾಧೀಶ, ವಕೀಲ, ಪಾದ್ರಿ, ವಿಶ್ವವಿದ್ಯಾನಿಲಯ, ಕಾಲೇಜು ಯಾ ಶಾಲೆ, ಮೊದಲಾದವುಗಳ ಸದಸ್ಯರು ಧರಿಸುವ, ಉದ್ಯೋಗಸೂಚಕವಾದ ಯಾ ಅವರವರಿಗೆ ಗೊತ್ತು ಮಾಡಿರುವ ಬೇರೆ ಬೇರೆ ಆಕಾರಗಳ) ನಿಲುವಂಗಿ; ಗೌನು.
ಪದಗುಚ್ಛ
  1. arms, gown ಯುದ್ಧ ಮತ್ತು ಶಾಂತಿ.
  2. dinner gown ಭೋಜನ ನಿಲುವಂಗಿ; ಊಟ ಮಾಡುವಾಗ ತೊಡುವ ಮೇಲುಡುಪು.
  3. tea gown ಟೀಗೌನು; ಉಪಾಹಾರ ನಿಲುವಂಗಿ.
  4. town and gown (ಮುಖ್ಯವಾಗಿ ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ನಗರಗಳಲ್ಲಿನ) ವಿಶ್ವನಿದ್ಯಾನಿಲಯದ ಸದಸ್ಯೇತರರು ಮತ್ತು ಸದಸ್ಯರು, ನಗರವಾಸಿಗಳು ಮತ್ತು ವಿಶ್ವವಿದ್ಯಾನಿಲಯದ ಸದಸ್ಯರು.