1frontier
ನಾಮವಾಚಕ
- ಎರಡು ದೇಶಗಳ ನಡುವಣ ಎಲ್ಲೆ, ಮೇರೆ.
- ಗಡಿನಾಡು; ಎರಡೂ ದೇಶಗಳ ಗಡಿಯಲ್ಲಿರುವ ಪ್ರದೇಶ, ಜಿಲ್ಲೆ.
- (ಅಮೆರಿಕನ್ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಸೀಮಾರೇಖೆ; ನಾಗರಿಕತೆಯ ಎಲ್ಲೆಗಳು.
- (ಸಾಮಾನ್ಯವಾಗಿ ಬಹುವಚನದಲ್ಲಿ) ವಿಜ್ಞಾನ ಮೊದಲಾದವುಗಳಲ್ಲಿನ ಸಾಧನೆಗಳು, ಎಲ್ಲೆಗಳು, ಗಡಿಗಳು: frontiers of research ಸಂಶೋಧನೆಯ ಸೀಮಾರೇಖೆಗಳು.