See also 1flutter
2flutter ಹ್ಲಟರ್‍
ನಾಮವಾಚಕ
  1. (ರೆಕ್ಕೆಗಳನ್ನು) ಪಟಪಟನೆ ಬಡಿಯುವುದು.
  2. ಪಟಪಟ ಹಾರಾಟ; ಪಟಪಟನೆ ರೆಕ್ಕೆ ಬಡಿಯುತ್ತಾ ಹಕ್ಕಿ ಅಲ್ಲಲ್ಲೇ ಹಾರಾಡುವುದು.
  3. (ಎದೆಬಡಿದುಕೊಳ್ಳುವಂಥ) ಉದ್ರೇಕ; ಉದ್ವೇಗ; ಸಂಭ್ರಮ; ಸಡಗರ: be in a flutter ಸಂಭ್ರಮಗೊಳ್ಳು. put in a flutter ಕಳವಳಪಡಿಸು; ಸಂಭ್ರಮಗೊಳಿಸು.
  4. ಗಡಿಬಿಡಿ; ಗದ್ದಲ: make a flutter ಗಡಿಬಿಡಿ ಮಾಡು.
  5. ತುಡಿತ; ಸ್ಪಂದನ; ಕಂಪನ.
  6. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಸಣ್ಣಬಾಜಿ; ಜೂಜಿನಲ್ಲಿ ಮಿತಪ್ರಮಾಣದಲ್ಲಿ ಹಣ ಒಡ್ಡುವುದು.
  7. (ಅಶಿಷ್ಟ) ಚಿಕ್ಕಪುಟ್ಟ ಸಟ್ಟಾವ್ಯಾಪಾರ.
  8. ಕಂಪನ; ಮುಖ್ಯವಾಗಿ ಒತ್ತಡದ ಕಾರಣ ವಿಮಾನ ಮೊದಲಾದವುಗಳ ಯಾವುದೇ ಭಾಗದಲ್ಲಿ ಆಗುವ ದೋಷಪೂರಿತವಾದ ಒಲೆದಾಟ, ತೊನೆದಾಟ.
  9. (ವೈದ್ಯಶಾಸ್ತ್ರ) ಕಂಪನ; ನಡುಕ; ಅದುರು; ತುಂಬ ವೇಗವಾದ, ಆದರೆ ಕ್ರಮಬದ್ಧವಾದ, ಸ್ನಾಯುವಿನ ಸಂಕೋಚನೆಗಳು.
  10. (ಸಂಗೀತ) ಕಂಪನ; ಸ್ಪಂದನ; ಗಾಳಿವಾದ್ಯವನ್ನು ಊದುವವನ ನಾಲಗೆಯ ಶೀಘ್ರ ಚಲನೆ: flutter–tonguing (ವಾದ್ಯಊದುವುದರಲ್ಲಿ) ನಾಲಗೆಯ ಕ್ಷಿಪ್ರಚಾಲನೆ; ನಾಲಗೆಯ ಕಂಪನ.
  11. (ಧ್ವನಿಯ) ಏರಿಳಿತ; ಶಬ್ದದ, ಧ್ವನಿಯ ಸ್ಥಾಯಿ ಯಾ ಪ್ರಮಾಣ ಬೇಗ ಬೇಗ ಬದಲಾಯಿಸುವುದು.
ಪದಗುಚ್ಛ

wing, tail flutter (ವಿಮಾನದ) ರೆಕ್ಕೆಯ, ಬಾಲದ – ನಡುಕ, ಅದುರು; ವಿಮಾನ ಹಾರಾಟದಲ್ಲಿನ ದೋಷದ ಎರಡು ಬಗೆಗಳು.