See also 2flop  3flop  4flop
1flop ಹ್ಲಾಪ್‍
ಸಕರ್ಮಕ ಕ್ರಿಯಾಪದ

ದೊಪ್ಪೆಂದು ಕೆಡವು, ಕೆಳಕ್ಕೆ ಬಿಸುಡು.

ಅಕರ್ಮಕ ಕ್ರಿಯಾಪದ
  1. (ಭಾರವಾಗಿ) ತೂಗಾಡು; ಓಲಾಡು; ತುಯ್ದಾಡು.
  2. ವಕ್ರವಕ್ರವಾಗಿ, ಸೊಟ್ಟಪಟ್ಟನಾಗಿ – ಓಡಾಡು, ನಡೆದಾಡು.
  3. ವಿಕಾರವಾಗಿ ಯಾ ಇದ್ದಕ್ಕಿದ್ದಂತೆ – ಕುಳಿತುಕೊ, ಮೊಣಕಾಲೂರಿಕೊ ಯಾ ಮಲಗಿಕೊ.
  4. ದೊಪ್ಪೆಂದು ಬೀಳು.
  5. (ಮೃದುವಾದ ವಸ್ತುವು ಯಾ ನೀರಿನಲ್ಲಿ ಚಪ್ಪಟೆ ವಸ್ತುವು ಬೀಳುವಾಗ) ದೊಪ್‍ ಎಂದು ಶಬ್ದಮಾಡು.
  6. (ಅಶಿಷ್ಟ) (ಪುಸ್ತಕ ಪ್ರಕಟಣೆ, ನಾಟಕ ಪ್ರದರ್ಶನ, ಮೊದಲಾದವು) ಬಿದ್ದು ಹೋಗು; ಕುಸಿದುಹೋಗು; ಅಯಶಸ್ವಿಯಾಗು; ಸೋಲನ್ನು ಅನುಭವಿಸು; ಅಧ್ವಾನವಾಗು; ಹಾಳಾಗು; ಕುಲಗೆಡು.
  7. (ಅಶಿಷ್ಟ) ಮಲಗು; ನಿದ್ದೆ ಮಾಡು.
  8. (ನಡೆವಳಿಕೆ ಮೊದಲಾದವನ್ನು) ಇದ್ದಕ್ಕಿದ್ದಂತೆ ಬದಲಾಯಿಸು.