See also 2fillet
1fillet ಹಿಲಿಟ್‍
ನಾಮವಾಚಕ
  1. ಕೂದಲುಗಟ್ಟು; ತಲೆಗಟ್ಟು; ತಲೆಗೂದಲನ್ನು ಕಟ್ಟಲು ಬಳಸುವ, ತಲೆಸುತ್ತ ಧರಿಸುವ – ಕಿರಿಯಪಟ್ಟಿ, ದಾರ, ಯಾ ಅಲಂಕಾರ ಪಟ್ಟಿ. Figure: fillet
  2. ಸುತ್ತುಪಟ್ಟಿ; ಕಟ್ಟುಪಟ್ಟಿ.
  3. (ಯಾವುದಾದರೂ ಪದಾರ್ಥದ) ತೆಳುವಾದ, ಕಿರಿದಾದ – ಪಟ್ಟಿ.
  4. (ಬಹುವಚನದಲ್ಲಿ) (ಪ್ರಾಣಿಯ) ಕಟಿ ಪ್ರದೇಶ; ಸೊಂಟದ ಭಾಗ.
  5. ಪ್ರಾಣಿಯ ಕಟಿ ಪ್ರದೇಶದ ಯಾ ಪಕ್ಕೆಲುಬುಗಳ ಪ್ರದೇಶದ, ಮೂಳೆಯಿಲ್ಲದ ಮಾಂಸದ ತುಂಡು.
  6. ಎಲುಬು ಇಲ್ಲದಂತೆ ಅರ್ಧಕ್ಕೆ ಯಾ ಕಾಲು ಭಾಗಕ್ಕೆ ಕತ್ತರಿಸಿದ ಈನಿನ ದಪ್ಪ ಭಾಗ.
  7. (ಎಲುಬು ತೆಗೆದು, ಸುರುಳಿಸುತ್ತಿ ತಯಾರಿಸಿದ ಕರುವಿನ) ಕಾಲಿನ ಮಧ್ಯಭಾಗ.
  8. ಇದೇ ರೀತಿ ತಯಾರಿಸಿದ ದನ, ಈನು, ಮೊದಲಾದವುಗಳ ಮಾಂಸ.
  9. (ವಾಸ್ತುಶಿಲ್ಪ) ಕಿರುಪಟ್ಟಿ: ಎರಡು ಅಲಂಕರಣ ದಿಂಡುಗಳ ನಡುವೆ ಯಾ ಕಂಬದ ಅಲಂಕಾರದ ಗಾಡಿಗಳ ನಡುವೆ ಇರುವ ಸಣ್ಣಪಟ್ಟಿ.
  10. (ವಂಶಲಾಂಛನ ವಿದ್ಯೆ) ಗುರಾಣಿಯ ಮೇಲುಭಾಗದಲ್ಲಿರುವ, ಅದರ ಕಾಲು ಭಾಗದಷ್ಟು ಅಗಲದ ಪಟ್ಟಿ.
  11. ಎತ್ತಿದ ಏಣು; ಉಬ್ಬೇಣು; ಯಾವುದಾದರೂ ವಸ್ತುವಿನ ಹೊರ ಮೈಮೇಲೆ ಹಾಕಿದ ಉಬ್ಬುಪಟ್ಟಿ.
  12. ರಟ್ಟುಗೆರೆ; (ಪುಸ್ತಕಕ್ಕೆ ರಟ್ಟು ಕಟ್ಟುವುದರಲ್ಲಿ) ರಟ್ಟಿನ ಮೇಲೆ ಒತ್ತಿ ಮೂಡಿಸಿದ ಸಾದಾಗೆರೆ.