See also 2example
1example ಇ(ಎ)ಗ್‍ಸಾಂಪ್ಲ್‍
ನಾಮವಾಚಕ
  1. ಉದಾಹರಣೆ; ನಿದರ್ಶನ; ದೃಷ್ಟಾಂತ; ಸಾಮಾನ್ಯ ನಿಯಮವನ್ನು ನಿದರ್ಶಿಸಲು ಕೊಡುವ ವಾಸ್ತವಾಂಶ, ಸಂಗತಿ, ವಿಷಯ: for example ಉದಾಹರಣೆಗೆ.
  2. (ಉದಾಹರಿಸಲು ಕೊಡುವ)
    1. ಸಮಸ್ಯೆ; ಪ್ರಶ್ನೆ.
    2. ಅಭ್ಯಾಸ.
  3. (ಕಸಬುಗಾರಿಕೆ, ಚಿತ್ರ, ಮೊದಲಾದವುಗಳ) ಮಾದರಿ.
  4. (ಇತರರಿಗೆ ಎಚ್ಚರಿಕೆಯಾಗಿ ತೋರಿಸುವ ಶಿಕ್ಷೆ ಮೊದಲಾದ) ಮೇಲ್ಪಂಕ್ತಿ: make an example of him ಅವನನ್ನು ಮೇಲ್ಪಂಕ್ತಿಯಾಗಿಸು; ಅವನನ್ನು (ಇತರರಿಗೆ ಎಚ್ಚರಿಕೆ ನೀಡಲು) ಶಿಕ್ಷಿಸು, ದಂಡಿಸು.
  5. (ಹಿಂದಿನ) ಬಳಕೆ; ವಾಡಿಕೆ; ಪದ್ಧತಿ; ಪೂರ್ವರೂಢಿ: beyond example ರೂಢಿಗೆ ಮೀರಿದ. without example ಹಿಂದಿನ ಬಳಕೆಯ ದೃಷ್ಟಾಂತವಿಲ್ಲದ.
  6. (ಅನುಕರಿಸಲು ಯೋಗ್ಯ ನಡೆವಳಿಯ) ಮೇಲ್ಪಂಕ್ತಿ; ಆದರ್ಶ; ಮಾದರಿ: give or set a good example ಒಳ್ಳೆಯ ಮೇಲ್ಪಂಕ್ತಿ ಹಾಕಿಕೊಡು.
ನುಡಿಗಟ್ಟು

take example by ಅನುಕರಿಸು; ಮೇಲ್ಪಂಕ್ತಿ ಅನುಸರಿಸು.