equivalence ಇಕ್ವಿವಲನ್ಸ್‍
ನಾಮವಾಚಕ
  1. ಸಮಾನಸ್ಥಿತಿ; ಸಮಾನಗುಣ; ಸಮಾನತೆ; (ಮೌಲ್ಯ, ಪ್ರಮಾಣ, ಗಾತ್ರ, ಶಕ್ತಿ, ಪರಿಣಾಮ, ಫಲ, ಅರ್ಥ, ಪ್ರಾಮುಖ್ಯ, ಮೊದಲಾದವುಗಳಲ್ಲಿ) ಕಾಲ ಮತ್ತು ಕೆಲಸದ ನಡುವಣ ಸಮೀಕರಣ.
  2. ಸಂವಾದಿ; ಸಂವಾದಿಯಾಗಿರುವ ವಸ್ತು, ಉದಾಹರಣೆ, ಮೊದಲಾದವು.
  3. (ರಸಾಯನವಿಜ್ಞಾನ) ಸಮಾನತೆ; ರಾಸಾಯನಿಕ ಸಂಯೋಗ ಸಾಮರ್ಥ್ಯದಲ್ಲಿ ಸಮನಾಗಿರುವಿಕೆ.
  4. (ತರ್ಕಶಾಸ್ತ್ರ) (ಎರಡು ಪಕ್ಷಗಳ, ಪ್ರಮೇಯಗಳ ನಡುವಣ) ಸಮಬಲತೆ; ಸಮಪ್ರಾಮಾಣ್ಯ.